by ಪ್ರಸನ್ನವೆಂಕಟದಾಸರು
ಬಿಡು ಮೂಢತನವ ಚಿತ್ತಷÀಂಡ ನಮ್ಮಕ್ರೀಡಾದ್ರಿಪನನೋಡುಕಂಡ ಪ.
ಬೇಡಿದೀಪ್ಸಿತವೀವ ಗೂಢ ಸುರಮಣಿಯುಗೂಡಿನೊಳಿರೆ ಅರೆಗೋಡಿಯಾಡದೆ ಬಿಡು 1
ಅರಸನೊಲಿದು ತಳವರನ ಓಲೈಸುವಪರಿಯಲಿ ಚಿರಧನಿಪರ ಆರಾಧನೆ ಬಿಡು 2
ಗುರುದ್ವಿಜವೈಶ್ವಾನರಸಾಕ್ಷ್ಯದಿ ಗ್ರಹಿತತರುಣಿ ಇರೆ ಪರನಾರಿಯರ ಪಂಬಲವ ಬಿಡು 3
ಸಿರಿವರದನವರ ಬಿರುದು ಹೊಗಳುತಲವರನಿತ್ಯಬೆರೆಯೋಣ ತರಕದಾರಿಯ ಬಿಡು4
ದೊರೆಗಳ ದೊರೆ ನನ್ನರಸ ಪ್ರಸನ್ನವೆಂಕಟರಮಣನಿರೆ ಅನ್ಯಾಸುರ ಭೂತಾರ್ಚನೆ ಬಿಡು 5
*********

No comments:
Post a Comment