Saturday, 2 November 2019

ಬಣ್ಣಿಸಲಳವೆ ನಿನ್ನ ಪನ್ನಗಶಯನ ankita pranesha vittala

by ಪ್ರಾಣೇಶದಾಸರು
ಬಣ್ಣಿಸಲಳವೆ ನಿನ್ನ |ಪನ್ನಗಶಯನ ಪ್ರಪನ್ನವತ್ಸಲ ರಂಗ ಪ  

ಮಧು ಕೈಟಭಾಂತಕನೆ ಮಧುರಾಪತಿ ಜಿತನೆ |ಮಧುಸಖಜನಕನೆ ಮಧುಮಾಂಶ್ರಿಯಾಂಬಕನೇ1

ಋಷಿ ಪತ್ನಿಯರ ಮೋಹಕ, ಋಷಿ ಪತ್ನಿಯತಾರಕ|ಋಷಿ ಪತ್ನಿಯ ನಾಶಕ ಋಷಿ ಪತ್ನೀ ಬಾಲಕ 2

ಪದುಮ ಸಂಭವನಯ್ಯ ಪದುಮೇಶಕವಿಗೇಯ |ಪದುಮಾವರದಜೀಯಪದುಮಜಾಂಡದೊಡೆಯ3

ಭಾನುಕೋಟಿ ಪ್ರಕಾಶ ಭಾನುಲೋಚನಾಧೀಶ |ಭಾನುಪ ಸುತ ಪೋಷ ಭಾನುಪಾಣಿ ನಿರ್ದೋಷ 4

ಹರಿಪ್ರಾಣೇಶ ವಿಠಲಯ್ಯಹರಿಶಯನ ಮತ್ಪ್ರಿಯ |ಹರಿಯಾಸ್ಯ ನರದೇಹ ಹರಿಸುವುದಘ ತ್ವರಿಯಾ 5
********

No comments:

Post a Comment