Monday, 11 November 2019

ಕೋಲ ತರುವೆ ತಾಳೋ ನಿನಗೆ ಬಾಲ ಕೃಷ್ಣನೇ ankita govinda

by ಗೋವಿಂದದಾಸ
ಕೋಲತರುವೆ ತಾಳೋ ನಿನಗೆ ಬಾಲ ಕೃಷ್ಣನೇ |ಪೇಳಿದ ಮಾತನು ಕೇಳುಶೂಲಿಮಿತ್ರನೇ ಪ

ನಾರಿ ಜನರ ದೂರಕೇಳಿಗಾರುಗೊಂಡೆನೇ ||ಕೃಷ್ಣ||ಸೀರೆಗಳ್ಳನೆಂದು ಹೆಸರನಿಟ್ಟುಕೊಂಡೆನೇ 1

ಸುದತಿಯರನು ಮೋಸಗೈವ ಹದನವರಿತೆನೇ ||ಕೃಷ್ಣ||ದಧಿಘೃತಚೋರನೆಂದು ಮೊದಲೆ ಕೇಳೆನೇ 2

ಕಂಡು ಸಹಿಸಲೆಂತು ನಿನ್ನ ಭಂಡತನವನೇ ||ಕೃಷ್ಣ||ಕಂಡ ಹೆಂಗಳ ಮೇಲೆ ಬಿದ್ದು ಪುಂಡು ಮಾಳ್ಪನೇ 3

ಅಂದು ಎನ್ನ ಉದರದಲ್ಲಿ ಬಂದು ಜನಿಸ್ಯಾನೇ ||ಕೃಷ್ಣ||ಸುಂದರ ಗೋವಿಂದನೆಂಬ ನಾಮಧರಿಸ್ಯಾನೇ 4
********

No comments:

Post a Comment