Thursday, 14 November 2019

ಮಂಗಳ ಜಯಜಯತೂ ಜಯತು ankita govinda

by ಗೋವಿಂದದಾಸ
ಮಂಗಳ ಜಯಜಯತೂ ಜಯತು ಜಯಮಂಗಳಶುಭಜಯತು ಪ 

ವಾರಿಜೋದ್ಭವನಿಗೆ ವಾಣಿ ಶಾರದೆಗೆನಾರಾಯಣನಿಗೆ ನಾರಿ ಲಕ್ಷುಮೀಗೆಮಾರಸಂಹಾರನಿಗೆ ಪಾರ್ವತೀ ದೇವಿಗೆನಾರೀ ರನ್ನೆಯರ್ ಹೂವಿನಾರತಿ ಬೆಳಗೆ1

ಸೃಷ್ಟಿಕರ್ತಗೆ ಸರ್ವ ಅಕ್ಷರದಾಯಿನಿಗೆರಕ್ಷಣ ಮೂರ್ತಿಗೆ ಅಕ್ಷಯಾಶ್ರಿತೆಗೆಶಿಕ್ಷೆ ರಕ್ಷಃ ದೇವಿ ಸೃಷ್ಟಿ ಸಂಹಾರಗೆಅಕ್ಷತೆಯಿಟ್ಟು ಸ್ತ್ರೀಯರ್ ಆರತಿ ಬೆಳಗೆ2

ವರಹಂಸ ಗಮನಗೆ ಮಯೂರ ವಾಹನಗೆಗರುಡ ಗಮನಗೆ ಮದಕರಿ ಧ್ವಜಿಗೆವೃಷಭವಾಹನನಿಗೆ ವರಸಿಂಹ ವಾಹಿನಿಗೆಸರಸಿಜಾಕ್ಷಿಯರ್ ಮುತ್ತಿನಾರತಿ ಬೆಳಗೆ3

ಕಮಂಡಲುಧಾರಿಗೆ ವರವೀಣಾಪಾಣಿಗೆಕೌಮೋದಕಿಧರಗೆಕಮಲಸುಮಕರಗೆಡಮರು ತ್ರಿಶೂಲಧರಗೆ ತೋಮರ ಪಾಣಿಗೆಕೋಮಲಾಂಗಿಯರ್ ಕುಂಕುಮದಾರತಿ ಬೆಳಗೆ4

ಅಂಬುಜಾಸನಗೆಶುಂಭಸಂಹಾರಳಿಗೆಕುಂಭಕರ್ಣಾಂತಕಗೆ ಮಹಿಷಮರ್ದಿನಿಗೆಸಂಭ್ರಮತ್ರಿಪುರಾರಿ ಚಂಡ ಮುಂಡಾರ್ದಿನಿಗೆಅಂಬುಜಾಕ್ಷಿಯರ್ ಸಂಭ್ರಮದಾರತಿ ಬೆಳಗೆ5

ಚಂದದಿ ಬ್ರಹ್ಮಗೆ ಚಂದಿರವದನೆಗೆಸುಂದರ ಮೂರ್ತಿಗೆ ಇಂದಿರೆಗೆಅಂದದ ಶಿವನಿಗೆ ಅರವಿಂದನೇತ್ರೆಗೆವಂದಿಸಿ ಗೋವಿಂದದಾಸನಾರತಿ ಬೆಳಗೆ6
********

No comments:

Post a Comment