Thursday, 14 November 2019

ಮಂಗಲ ಮೂರುತಿಗೇ ನಮೋ ankita govinda

by ಗೋವಿಂದದಾಸ
ಮಂಗಲ ಮೂರುತಿಗೇ ನಮೋ ನಮೋ ಹರೀಮಂಗಲ ಚರಿತಗೆ ನಮೋ ನಮೋ ಪ

ರಂಗಾ ಕೃಪಾಂಗಾ ಶ್ರೀರಂಗಾ ನರಸಿಂಹಗೆಅಂಗಾ ಶೃಂಗಾರನಿಗೆ ನಮೋ ನಮೋಅ.ಪಶೇಷಶಯನ ವಿಧೀಶ ಸುರಾರ್ಚಿತಕೇಶವ ತ್ರೈಜಗದೀಶ ಜಲಜನಾಭದಾಸರ ಸಾಸಿರ ದೋಷ ವಿನಾಶನಶ್ರೀಶ ಸಂದೇಶಗೆ ನಮೋ ನಮೋ1

ಮಾರಜನಕದೈತ್ಯಾರಿ ಚಕ್ರಾಂಕಿತಸಾರಸಾಕ್ಷ ಯತಿ ವಾರವಂದಿತಚರಣಹಾರಾ ಹೀರಾವಳಿ ಕೇಯೂರವ ಧರಿಸಿದಧೀರ ಉದಾರಿಗೆ ನಮೋ ನಮೋ2

ಮಂದರೋದ್ಧರ ಭವಬಂಧ ವಿಮೋಚನಇಂದಿರೆಪತಿ ಮಂದಾಕಿನಿಪಿತ ದೇವಾಸಿಂಧುಮಂದಿರದಲಿ ನಿಂದ ಗೋವಿಂದಗೆನಂದನ PÀಂದಗೆ ನಮೋ ನಮೋ3
*******

No comments:

Post a Comment