Friday 27 December 2019

ಪೂಜಿಸುವೆನೆ ತುಳಸಿ ನಿನ್ನ ಬೇಗ ಸಲಹೆ ನೀ ankita gopalakrishna vittala

ಪೂಜಿಸುವೆನೆ ತುಳಸಿ ನಿನ್ನ ಬೇಗ ಸಲಹೆ ನೀ ||pa||

ಜಾಜಿ ಮಲ್ಲಿಗೆ ಕುಸುಮದಿಂದ ಪೂಜೆಗೈಯ್ಯವೆ ||a.pa||

ಧ್ಯಾನ ಆವಾಹನೆಯಿಂದ ಶ್ರೀ ವರನ ಸಹ
ನಾನಾ ಮಂಗಳ ದ್ರವ್ಯದಿ ನಾನು ಪೂಜಿಪೆ ||1||

ವೃಂದಾವನದಿ ಮೆರೆಯುವವಳೆ ಸುಂದರಾಂಗಿಯೆ
ನಂದಕಂದಗೆ ಮಾಲೆಯವಳೆ ಇಂದು ಕರುಣಿಸೆ ||2||

ಗೋಪಾಲಕೃಷ್ಣವಿಠ್ಠಲನ ರೂಪ ತೋರೆ ನೀ
ಶ್ರೀಪತಿಯ ಪಾದ ತೋರಿ ಕಾಪಾಡೆ ದೇವಿ ||3||
********

No comments:

Post a Comment