kruti by pradyumna teertha ಪ್ರದ್ಯುಮ್ನತೀರ್ಥರು
ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆ
ಸುಮ್ಮನೆ ಬಿಡುವದು ಸಮ್ಮತವೇ ನಿನಗೆ ಪ
ಹೆತ್ತ ಬಾಲರು ಮಂದಮತಿಗಳಾದರೆ ತಾಯಿ
ಸತ್ತು ಹೋಗಲಿ ಎಂದು ಎತ್ತದೆ ಬಿಡುವೊಳೆ 1
ನಿಮ್ಮ ಮಾತಿಗೆ ಹರಿ ಸಮ್ಮತನಾಗುವ
ಕುಮತಿಗಳೆಣಿಸದೆ ರಾಮ ಮೂರುತಿ ತೋರೆ2
ಸಿಂಧುತನಯೆ ಎನ್ನ ಬಂಧ ಬಿಡಿಸಿ ಬೇಗ
ನಂದ ಕಂದನ ಪಾದ ಪೊಂದಿರುವಂತೆ ಮಾಡೆ 3
ತತ್ವೇಶರೆಲ್ಲರೂ ನಿತ್ಯಾಧೀನರು ನಿಮಗೆ
ಭೃತ್ಯಗೆ ನಿಜ ಹರಿ ಭಕ್ತಿ ಕೊಡುವಂತೆ ಪೇಳೆ 4
ಎನ್ನಲಿರುವ ಹೀನರೋಡಿಸಿ ಬೇಗ
ಪನ್ನಗಾಚಲವಾಸ ಶ್ರೀ ನರಹರಿ ತೋರೆ 5
****
ಅಮ್ಮಾ ಲಕುಮಿದೇವಿ ।
ನಿಮ್ಮರಸನ ತೋರೆ
ಸುಮ್ಮನೆ ಬಿಡುವದು ।
ಸಮ್ಮತವೇ ನಿನಗೆ ।। ಪಲ್ಲವಿ ।।
ಹೆತ್ತ ಬಾಲರು । ಮಂದ ।
ಮತಿಗಳಾದರೆ ತಾಯಿ
ಸತ್ತು ಹೋಗಲಿ ಎಂದು ।
ಎತ್ತದೆ ಬಿಡುವೊಳೆ ।। ಚರಣ ।।
ನಿಮ್ಮ ಮಾತಿಗೆ ಹರಿ ।
ಸಮ್ಮತನಾಗುವ
ಕುಮತಿಗಳೆಣಿಸದೆ ।
ರಾಮ ಮೂರುತಿ ತೋರೆ ।। ಚರಣ ।।
ಸಿಂಧುತನಯೆ ಎನ್ನ ।
ಬಂಧ ಬಿಡಿಸಿ ಬೇಗ ।
ನಂದ ಕಂದನ ಪಾದ ।
ಪೊಂದಿರುವಂತೆ ಮಾಡೆ ।। ಚರಣ ।।
ತತ್ವೇಶರೆಲ್ಲರೂ ನಿ।
ತ್ಯಾಧೀನರು ನಿಮಗೆ
ಭೃತ್ಯಗೆ ನಿಜ ಹರಿ ।
ಭಕ್ತಿ ಕೊಡುವಂತೆ ಪೇಳೆ ।। ಚರಣ ।।
ಎನ್ನಲಿರುವ ।
ಹೀನರೋಡಿಸಿ ಬೇಗ ।
ಪನ್ನಗಾಚಲವಾಸ ।
ಶ್ರೀ ನರಹರಿ ತೋರೆ ।। ಚರಣ ।।
****
No comments:
Post a Comment