Thursday 17 October 2019

ಸೇತು ಮಾಧವರಾಯನಿಗೆ ನೀನೆ ಪ್ರೀತಿಯಾದವಾ ankita vijaya vittala

ವಿಜಯದಾಸ
ಸೇತು ಮಾಧವರಾಯನಿಗೆ | ನೀನೆ | ಪ್ರೀತಿಯಾದವಾ |
ಭೂತಳದೊಳಗತಿ ಖ್ಯಾತಿ ಮಾರುತಿ ದೇವಾ ಪ

ಶ್ವೇತ ಶರೀರ |
ಭೂತನಾಥನ ಪ್ರಿಯಾ ಭುಜಗಾಧಿಪಶಯ್ಯಾ |
ಮಾತು ಮಾತಿಗೆ ನಗುತ ನೋಡುವ ದೇವ 1

ಭಕುತಿಕೊಡು ಬೇಗ ಎನಗೆ ಶ್ರೀ ಲಕುಮಿಪತಿ ಈಗ |
ವಿಕಸಿತ ಮಹಾಕೃತು ಮಹಿಮಾ 2

ಆದಿದೈವನೆ ಸಕಲ ಜೀವಾದಿ ಭೇದವೆ |
ಯಾದವ ಕುಲಮಣಿಯಾದ ಅಣೋರಣಿ |ಮಾಧವ ವಿಜಯವಿಠ್ಠಲ ರಘುರಾಮಾ 3
********

No comments:

Post a Comment