ವಿಜಯದಾಸ
ನಿನ್ನ ವಶದಲಿ ಇದ್ದು ಇದ್ದು
ಮುನ್ನೆ ದುರ್ವೃತ್ತಿಗೆ ಪೋಗುವುದೆನ್ನ ಮನಾ ಪ
ಚಿತ್ರವಾದ ಕರಿಯ ಶೃಂಗರಿಸಿ ಮೇಲೆ
ಛತ್ರಿಗೆ ನೆರಳಲ್ಲಿ ಕುಳ್ಳಿರೆನೆ
ಆನೆ ಕೆಳಗೆ ಇಳಿದು ಬೂದಿಯೊಳಗಿಪ್ಪ
ಕತ್ತೆ ಏರುವನೆಂದು ಇಚ್ಛೆ ಮಾಡುತಲಿದೆ 1
ಕಾಲಕಾಲಕೆ ಸುಧಿಯ ಸವಿದು
ಮಾಣಿಕದ ಉಯ್ಯಾಲೆ ಮೇಲಾಡುತ್ತ ಬಾಳು ಎನೆ
ತಾಳವೃಕ್ಷವನೇರಿ ತಲೆಕೆಳಗಾಗಿ ತಾ
ಬೀಳುವೆನೆಂದು ಅಪೇಕ್ಷೆ ಮಾಡುತಲಿದೆ 2
ವೇಣಿ ಮಾಧವರಾಯಾ ನಿನ್ನ ಚರಣಾಂಬುಜ
ಕಾಣುವ ಪ್ರಕಾಶ ಉದಾಸಸಿ
ಕ್ಷೋಣಿಯೊಳಗೆ ಮಹಾ ಕತ್ತಲೆ ಬಯಸುವೆ
ಹೀನನಂತೆಯಾದೆ ವಿಜಯವಿಠ್ಠಲರೇಯಾ 3
*********
ನಿನ್ನ ವಶದಲಿ ಇದ್ದು ಇದ್ದು
ಮುನ್ನೆ ದುರ್ವೃತ್ತಿಗೆ ಪೋಗುವುದೆನ್ನ ಮನಾ ಪ
ಚಿತ್ರವಾದ ಕರಿಯ ಶೃಂಗರಿಸಿ ಮೇಲೆ
ಛತ್ರಿಗೆ ನೆರಳಲ್ಲಿ ಕುಳ್ಳಿರೆನೆ
ಆನೆ ಕೆಳಗೆ ಇಳಿದು ಬೂದಿಯೊಳಗಿಪ್ಪ
ಕತ್ತೆ ಏರುವನೆಂದು ಇಚ್ಛೆ ಮಾಡುತಲಿದೆ 1
ಕಾಲಕಾಲಕೆ ಸುಧಿಯ ಸವಿದು
ಮಾಣಿಕದ ಉಯ್ಯಾಲೆ ಮೇಲಾಡುತ್ತ ಬಾಳು ಎನೆ
ತಾಳವೃಕ್ಷವನೇರಿ ತಲೆಕೆಳಗಾಗಿ ತಾ
ಬೀಳುವೆನೆಂದು ಅಪೇಕ್ಷೆ ಮಾಡುತಲಿದೆ 2
ವೇಣಿ ಮಾಧವರಾಯಾ ನಿನ್ನ ಚರಣಾಂಬುಜ
ಕಾಣುವ ಪ್ರಕಾಶ ಉದಾಸಸಿ
ಕ್ಷೋಣಿಯೊಳಗೆ ಮಹಾ ಕತ್ತಲೆ ಬಯಸುವೆ
ಹೀನನಂತೆಯಾದೆ ವಿಜಯವಿಠ್ಠಲರೇಯಾ 3
*********
No comments:
Post a Comment