tvg
gurushreesha vittala dasa ಕೃತಿ
shishya of shreesha vittala dasa is gurushreesha vittala dasa
(ಶ್ರೀ ಹುಂಡೇಕಾರ ದಾಸ= shreesha vittala dasa)
ಬಾರೋ ಗುರುರಾಘವೇಂದ್ರ ಬಾರಯ್ಯ ಬಾ ಬಾ
ಬಾರೋ ಗುರುರಾಘವೇಂದ್ರ || ಪ ||
ಹಿಂದು ಮುಂದಿಲ್ಲೆನಗೆ ನೀ ಗತಿ
ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ
ನಂದಕಂದ ಮುಕುಂದ ಬಂಧೋ || ಅ ||
ಸೇವಕನೆಲವೊ ನಾನು ಧಾವಿಸಿ ಬಂದೆನು
ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ
ಸೇವ್ಯ ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿ || ೧ ||
ಕರೆದರೆ ಬರುವಿಯೆಂದು ಸಾರುವುದು ಡಂಗುರ
ತ್ವರಿತದಿ ಒದಗೋ ಬಂದು
ಜರಿಯ ಬೇಡವೊ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ
ಹರಿಯ ಸ್ಮರಣೆಯ ನಿರುತದಲಿ
ಎನಗ ಹರುಷದಲಿ ನೀ ನಿರುತ ಕೊಡುತಲಿ || ೨ ||
ನರಹರಿಪ್ರಿಯನೆ ಬಾ ಗುರುಶ್ರೀಶವಿಠ್ಠಲನ
ಕರುಣಾಪಾತ್ರನೆ ಬೇಗ ಬಾ
ಗುರುವರನೆ ಪರಿಪೋಷಿಸೆನ್ನನು
ಮರೆಯದಲೆ ತವಚರಣ ಕೋಟಿಯಲಿರಿಸಿ
ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ || ೩ ||
***
Baro gururaghavendra barayya ba ba baro gururaghavendra || pa ||
hindu mundillenage ni gati endu nambide ninna padava bandhanava bidisenna karapidi nandakanda mukunda bandho || a ||
sevakanelavo nanu dhavisi bandenu seve nidelo ninu sevakana seveyanu sevisi sevya sevaka bhavaviyuta thavuganisi poreyo dhareyolu pavanatmaka kava karuni || 1 ||
karedare baruviyendu saruvudu dangura tvaritadi odago bandu jariya bedavo baride ninnaya viraha talade manadi koraguve hariya smaraneya nirutadali enaga harusadali ni niruta kodutali || 2 ||
naraharipriyane ba gurusrisaviththalana karunapatrane bega ba guruvarane pariposisennanu mareyadale tavacarana kotiyalirisi caranambujava toruta tvaritadali ododi ba ba || 3 ||
***
pallavi
bArO guru rAghavEndra bArayya bA bA hindu mundellenage nI gati
caraNam 1
endu pondide ninna pAdava bandhanava biDisenna karapiDi
nanda kaNDa mukunda bandhO sEvakanelO nAnu ninnaya pAda
caraNam 2
sEvenIDelO nInu sEvakana sEveyanu sEvisi sEvya sEvyaka bhAva vIyuta
dhAvisEnnanu poreyO dhareyoLu pavanAtmaka kAyO karuNisi
caraNam 3
karedare baruvIyendu sAruvudu DangUra tvaritaDi odagO bandU
jareyu vyAdhiyu bArade ninna viraha tALade pAdake eraguve
caraNam 4
hariya smareNeya nIDutenage harushadali nI niruta koDutali
narahari priyanE nI bA guru SrIsha viThalana karuNA pAtrane bEga bA
caraNam 5
guruvarane nI paritOshisEnnanu mareyadalE tava caraNa kOTE
lirisi caraNAmbujava tOruta tvaritadali ODODi bA bA
***
ಬಾರೋ ಗುರು ರಾಘವೇಂದ್ರ ।
ಬಾರಯ್ಯ ಬಾ ಬಾ ಬಾರೋ
ಗುರು ರಾಘವೇಂದ್ರ ।। ಪಲ್ಲವಿ ।।
ಹಿಂದೂ ಮುಂದಿಲ್ಲೆನಗೆ ನೀ ಗತಿ ।
ಯೆಂದು ನಂಬಿದೆ ನಿನ್ನ ಪಾದವ ।
ಬಂಧನವ ಬಿಡಿಸೆನ್ನ ಕರ ಪಿಡಿ ।
ನಂದ ಕಂದ ಮುಕುಂದ ಬಂಧು ।। ಅ. ಪ ।।
ಸೇವಕನೆಲೋ ನಾನು
ಧಾವಿಸಿ ಬಂದೆನು ।
ಸೇವೆ ನೀಡೆಲೋ ನೀನು ।
ಸೇವಕನ ಸೇವಯನು ಸೇವಿಸಿ ।।
ಸೇವ್ಯ ಸೇವಕ
ಭಾವವೀಯುತ ।
ಠಾವುಗಾಣಿಸಿ ಪೊರೆಯೊ
ಧರೆಯೊಳು ।
ಪಾವನಾತ್ಮಕ ಕಾವ
ಕರುಣಿ ।। ಚರಣ ।।
ಕರೆದರೆ ಬರುವಿಯೆಂದು
ಸಾರುವುದು ಡಂಗುರ ।
ತ್ವರಿತದಿ ಒದಗೋ ಬಂದು ।
ಜರಿಯ ಬೇಡವೋ
ಬರಿದೆ ನಿನ್ನಯ ।।
ವಿರಹ ತಾಳದೆ
ಮನದಿ ಕೊರಗುವೆ ।
ಹರಿ ಸ್ಮರಣೆಯ
ನಿರುತದಲಿ ಯೆನಗೆ ।
ಹರುಷದಲಿ ನೀ ನಿರುತ
ಕೊಡುತಲಿ ।। ಚರಣ ।।
ನರಹರಿ ಪ್ರಿಯನೇ ಬಾ
ಗುರು ಶ್ರೀಶವಿಠ್ಠಲನ ।
ಕರುಣಾ ಪಾತ್ರನೆ
ಬೇಗ ಬಾ ।
ಗುರುವರನೆ
ಪೋಷಿಸೆನ್ನನ್ನು ।।
ಮರೆಯದಲೆ ತವ
ಚರ ಕೋಟಿಯಲಿರಿಸಿ ।
ಚರಣಾಂಬುಜಾವಾ ತೋರುತ ।
ತ್ವರಿತದಲಿ ಓಡೋಡಿ
ಬಾ ಬಾ ।। ಚರಣ ।।
****
ರಾಗ : ಮಧ್ಯಮಾವತಿ ತಾಳ : ಅಟ್ಟತಾಳ (raga, taala may differ in audio)
ಬಾರೋ ಗುರು ರಾಘವೇಂದ್ರ |
ಬಾರಯ್ಯ ಬಾ ಬಾ ಬಾರೋ ಗುರು ರಾಘವೇಂದ್ರ | ಪ |
ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ |
ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು | ಅ | ಪ |
ಸೇವಕನೆಲವೋ ನಾನು | ಧಾವಿಸಿ ಬಂದೆನು |
ಸೇವೆಯ ನೀಡೋ ನೀನು |
ಸೇವಕನ ಸೇವೆಯನು ಸೇವಿಸಿ |
ಸೇವ್ಯ ಸೇವಕ ಭಾವವೀಯುತ |
ಠಾವುಗಾಣಿಸಿ ಪೊರೆಯೊ ಧರೆಯೊಳು |
ಪಾವನಾತ್ಮಕ ಕಾವ ಕರುಣಿ | ೧ |
ಕರೆದರೆ ಬರುವಿಯೆಂದು |
ಸಾರುವುದು ಡಂಗುರ |
ತ್ವರಿತದಿ ಒದಗೋ ಬಂದು |
ಜರಿಯ ಬೇಡವೊ ಬರಿದೆ ನಿನ್ನಯ |
ವಿರಹ ತಾಳದೆ ಮನದಿ ಕೊರಗುವೆ |
ನಿರುತ ಹರಿಯ ಸ್ಮರಣೆಯ ಎನಗ್ಹರುಷದಲಿ ನೀ ನಿರುತ ಕೊಡುತಲಿ | ೨ |
ನರಹರಿ ಪ್ರಿಯನೇ ಬಾ |
ಗುರು ಶ್ರೀಶವಿಟ್ಠಲನ ಕರುಣಾಪಾತ್ರನೇ ಬೇಗ ಬಾ |
ಗುರುವರನೆ ಪರಿಪೋಷಿಸೆನ್ನನು |
ಮರೆಯದಲೆ ತವ ಶರಣ ಕೋಟಿಯ- |
ಲಿರಿಸಿ ಚರಣಾಂಬುಜವ ತೋರುತ ತ್ವರಿತದಲಿ ಓಡೋಡಿ ಬಾ ಬಾ | ೩ |
****
ಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾ
ಬಾರೋ ಗುರು ರಾಘವೇಂದ್ರ ||ಪ||
ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ ||
ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು|| ಅ.ಪ||
ಸೇವಕನೆಲೊ ನಾನು |
ಧಾವಿಸಿ ಬಂದೆನು |
ಸೇವೆಯ ನೀಡೋ ನೀನು ||
ಸೇವಕನ ಸೇವೆಯನು ಸೇವಿಸಿ |
ಸೇವ್ಯ ಸೇವಕ ಭಾವವೀಯುತ |
ಠಾವುಗಾಣಿಸಿ ಪೊರೆಯೊ ಧರೆಯೊಳು |
ಪಾವನಾತ್ಮಕ ಕಾವ ಕರುಣಿ || ೧ ||
ಕರೆದರೆ ಬರುವಿಯೆಂದು |
ಸಾರುವುದು ಡಂಗುರ |
ತ್ವರಿತದಿ ಒದಗೋ ಬಂದು ||
ಜರಿಯ ಬೇಡವೊ ಬರಿದೆ ನಿನ್ನಯ |
ವಿರಹ ತಾಳದೆ ಮನದಿ ಕೊರಗುವೆ |
ನಿರುತ ಹರಿಯ ಸ್ಮರಣೆಯ
ಎನಗ್ಹರುಷದಲಿ ನೀ ನಿರುತ ಕೊಡುತಲಿ|| ೨ ||
ನರಹರಿ ಪ್ರಿಯನೇ ಬಾ |
ಗುರು ಶ್ರೀಶ ವಿಟ್ಠಲ ನ ಕರುಣಾಪಾತ್ರನೇ ಬೇಗ ಬಾ |
ಗುರುವರನೆ ಪರಿಪೋಷಿಸೆನ್ನನು ||
ಮರೆಯದಲೆ ತವ ಶರಣ ಕೋಟಿಯ- |
ಲಿರಿಸಿ ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ || ೩ ||
***
No comments:
Post a Comment