Sunday, 5 December 2021

ಮಾತಾಡೇ ಎನ್ನ ಮೌನದ ಗೌರೀ ಯಾತಕ ಚಲಮನ ankita shreeda vittala MAATAADE ENNA MOUNADA GOWRI YAATAKA CHALANAMANA






ಮಾತಾಡೇ ಎನ್ನ ಮೌನದ ಗೌರೀ
ಯಾತಕಚಲಮನ ಸೋತವನೊಡನೆ
ಮಾತಾಡೇ ಗೌರಿ ಮಾತಾಡೇ||

ನಸುನಗೆ ಮುಖವಿದು ಬಾಡಿ ಕೆಂದುಟಿಯು
ಎಸೆದಿರಲು ನಾನೋಡಿ
ವಸುಧೆಯೊಳಗೆ ನಾ ಜೀವಿಸಲಾರೆ
ಘಸಘಸವ್ಯಾತಕೆ ತುಂಬಿತÀು ಅರಗಿಣಿ ||

ಕ್ಷಣ ಬಿಟ್ಟಿರಲಾರೆ ಅಮ್ಮ
ಷಣ್ಮುಖ ಗಣಪರ ತಾಯೆ ನೀ ಬಾರೇ
ವಸುಧೆಯೊಳಗೆ ನಾ ಜೀವಿಸಲಾರೆ
ಘಸಘಸವ್ಯಾತಕೆ ತುಂಬಿತು ಅರಗಿಣಿ ||

ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ-
ರಾಧವು ಇದ್ದರು ತಾಳೇ
ಶ್ರೀದವಿಠಲನ ಪಾದ ಕಿಂಕಿಣಿಯೇ
ಆದರಿಸುವೆ ನಾ ಆದರಿಸುವೆನೇ ||
****

No comments:

Post a Comment