Saturday 4 December 2021

ಎನ್ನ ಕಂದ ಹಳ್ಳಿಯ ಹನುಮ ಚೆನ್ನಾಗೈದಾರಾ ankita neleyadikeshava ENNA KANDA HALLIYA HANUMA CHENNAAGAIDAARA



ಎನ್ನ ಕಂದ ಹಳ್ಳಿಯ ಹನುಮ ||ಪ||

ಚೆನ್ನಾಗೈದಾರಾ ಲಕ್ಷ್ಮಣದೇವರು ||ಅಪ||

ತುಪ್ಪ ಪಂಚಾಮೃತವಂದು ಅಡವಿಗಡ್ಡೆಗಳಿಂದು
ಕರ್ಪೂರ ವೀಳ್ಯವಂದು ಕುರುಕು ಇಂದು
ಸುಪ್ಪತ್ತಿಗೆ ಮಂಚವಂದು ಹುಲ್ಲುಹಾಸಿಗೆಯಿಂದು
ಶ್ರೀಪತಿ ರಾಘವ ಕ್ಷೇಮದಲೈದಾರೇ  ||೧||

ನವವಸ್ತ್ರಗಳು ಅಂದು ನಾರಸೀರೆಗಳಿಂದು
ಹೂವಿನ ಗಂಟು ಅಂದು ಜಡೆಗಳಿಂದು
ಜವ್ವಾಜಿಕಸ್ತೂರಿಯಂದು ಭಸಿತ ಧೂಳಿಂದು
ಶ್ರೀವರ ರಾಘವ ಕ್ಷೇಮದಲೈದಾರೇ ||೨||

ಕನಕರಥಗಳಂದು ಕಾಲುನಡಿಗೆಯಿಂದು
ಘನ ಛತ್ರ ಚಾಮರವಂದು ಬಿಸಿಲು ಇಂದು
ಸನಕಾದಿಗಳೋಲೈಪ ಆದಿಕೇಶವ ನಮ್ಮ
ಹನುಮೇಶ ರಾಘವ ಕ್ಷೇಮದಲೈದಾರೇ ||೩||
***

ಎನ್ನ ಕಂದ ಹಳ್ಳಿಯ ಹನುಮಾ
ಚೆನ್ನಾಗಿ ಇಹರೆ ಲಕ್ಷ್ಮಣ ದೇವರು || PA ||

ತುಪ್ಪ ಪಂಚಾಮೃತವಂದು ಅಡವಿಗಡ್ಡೆಗಳಿಂದು
ಕರ್ಪೂರ ವೀಳ್ಯವಂದು ಕರುಕು ಇಂದು
ಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆ ಇಂದು
ಶ್ರೀಪತಿ ರಾಘವ ಕ್ಷೇಮದಲೈದಾರೆ || 1 ||

ನವ ವಸ್ತ್ರಗಳು ಅಂದು ನಾರುಸೀರೆಗಳಿಂದು
ಹೂವಿನ ಗಂಟು ಅಂದು ಜಡೆಗಳಿಂದು
ಜವ್ವಾ ಜಿ ಕತ್ತುರಿಯಂದು ಭಸಿತ ಧೂಳಿಯಿಂದು
ಶ್ರೀವರ ರಾಘವ ಕ್ಷೇಮದಲೈದಾರೆ || 2 ||

ಕನಕ ರಥಗಳಂದು ಕಾಲುನಡಿಗೆಯಿಂದು
ಘನ ಛತ್ರ ಚಾಮರ ಅಂದು ಬಿಸಿಲು ಇಂದು
ಸನಕಾದಿಗಳೋಲೈಪ ಆದಿಕೇಶವ ನಮ್ಮ
ಹನುಮೇಶ ರಾಘವ ಕ್ಷೇಮದಲೈದಾರೆ ||3 ||
***

Enna kanda haḷḷiya hanumā cennāgi ihare lakṣmaṇa dēvaru ||pa||

tuppa pan̄cāmr̥tavandu aḍavigaḍḍegaḷindu karpūra vīḷyavandu karuku indu suppattige man̄cavandu hullu hāsige indu śrīpati rāghava kṣēmadalaidāre ||1||

nava vastragaḷu andu nārusīregaḷindu hūvina gaṇṭu andu jaḍegaḷindu javvā ji katturiyandu bhasita dhūḷiyindu śrīvara rāghava kṣēmadalaidāre ||2||

kanaka rathagaḷandu kālunaḍigeyindu ghana chatra cāmara andu bisilu indu sanakādigaḷōlaipa ādikēśava nam’ma hanumēśa rāghava kṣēmadalaidāre ||3|

Plain English

Enna kanda halliya hanuma cennagi ihare laksmana devaru ||pa||

tuppa pancamrtavandu adavigaddegalindu karpura vilyavandu karuku indu suppattige mancavandu hullu hasige indu sripati raghava ksemadalaidare ||1||

nava vastragalu andu narusiregalindu huvina gantu andu jadegalindu javva ji katturiyandu bhasita dhuliyindu srivara raghava ksemadalaidare ||2||

kanaka rathagalandu kalunadigeyindu ghana chatra camara andu bisilu indu sanakadigalolaipa adikesava nam’ma hanumesa raghava ksemadalaidare ||3|
***


enna kaMda haLLiya hanuma ||pa||
cennaagaidArA lakShmaNadEvaru ||apa||

tuppa paMcaamRutavaMdu aDavigaDDegaLiMdu
karpUra vILyavaMdu kuruku iMdu
suppattige maMcavaMdu hulluhaasigeyiMdu
SrIpati raaGava kShEmadalaidaarE  ||1||

navavastragaLu aMdu naarasIregaLiMdu
hUvina gaMTu aMdu jaDegaLiMdu
javvaajikastUriyaMdu bhasita dhULiMdu
SrIvara raaghava kShEmadalaidaarE ||2||

kanakarathagaLaMdu kaalunaDigeyiMdu
Gana Catra caamaravaMdu bisilu iMdu
sanakaadigaLOlaipa AdikESava namma
hanumESa raaghava kShEmadalaidaarE ||3||
***

ಎನ್ನ ಕಂದ ಹಳ್ಳಿಯ ಹನುಮಾ
ಚೆನ್ನಾಗಿ ಇಹರೆ ಲಕ್ಷ್ಮಣ ದೇವರು ||ಪ||

ತುಪ್ಪ ಪಂಚಾಮೃತವಂದು ಅಡವಿಗಡ್ಡೆಗಳಿಂದು
ಕರ್ಪೂರ ವೀಳ್ಯವಂದು ಕರುಕು ಇಂದು
ಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆ ಇಂದು
ಶ್ರೀಪತಿ ರಾಘವ ಕ್ಷೇಮದಲೈದಾರೆ    ||೧||

ನವವಸ್ತ್ರಗಳು ಅಂದು ನಾರಸೀರೆಗಳಿಂದು
ಹೂವಿನ ಗಂಟು ಅಂದು ಜಡೆಗಳಿಂದು
ಜವಾಜಿ ಕತ್ತುರಿಯಂದು ಭಸಿತಧೂಳಿಯಿಂದು
ಶ್ರೀವರ ರಾಘವ ಕ್ಷೇಮದಲೈದಾರೆ    ||೨||

ಕನಕರಥಗಳಂದು ಕಾಲುನಡಿಗೆಯಿಂದು
ಘನಸತ್ತಿಗೆಯಂದು ಬಿಸಿಲು ಇಂದು
ಸನಕಾದಿಗಳೋಲೈಪ ಆದಿಕೇಶವ ನಮ್ಮ
ಹನುಮೇಶ ರಾಘವ ಕ್ಷೇಮದಲೈದಾರೆ    ||೩|
********

No comments:

Post a Comment