Sunday, 26 September 2021

ಪಾಹಿ ಪಾಹಿ ನಿತ್ಯ ನಮ್ಮ ಪಾಲಕಾ ನೀ ಪರಬ್ರಹ್ಮ ankita madhwesha vittala

ರಾಗ - : ತಾಳ -


ಪಾಹಿ ಪಾಹಿ ನಿತ್ಯ ನಮ್ಮ ಪಾಲಕಾ ನೀ ಪರಬ್ರಹ್ಮ l

ದೇಹಿ ದೇಹಿ ನಿನ್ನಲ್ಲಿ ಪ್ರೇಮ ಸೀತಾರಾಮ ll ಪ ll


ತಾಪ ಮೂರರಿಂದ ಬೆಂದೆ ತಾರಕ ನೀನೆಂದು ಬಂದೆ l

ಶ್ರೀಪತಿ ನೀನಲ್ಲವೆ ಭೌಮಾ ಸೀತಾರಾಮ ll 1 ll


ದೂಷಿತರೊಳಗಾಡಿದೆ ದೋಷರಾಶಿಯ ಮಾಡಿದೆ l

ಲೇಸು ಲೇಸು ನಿಲ್ಲೊ ತ್ರಿಧಾಮಾ ಸೀತಾರಾಮ ll 2 ll


ಮೊರೆಯೊಕ್ಕೆ ಬಿಡಾಸಲ್ಲ ಗುರುಮದ್ವೇಶವಿಟ್ಠಲ್ಲ l

ಕರುಣಾದಿ ಸದ್ಗುಣಸ್ತೋಮಾ ಸೀತಾರಾಮ ll 3 ll

***

 

No comments:

Post a Comment