..
kruti by ಭೀಮಾಶಂಕರರು ದಾಸರು bheemashankara
ಧನ್ಯ ಜಗಮಾನ್ಯ | ನಿತ್ಯ ನಿರಂಜನ ವಸ್ತುವಾದವ ಪ
ಉತ್ತಮ ದೇಹದಿ ಬಂದೂ | ವಯೋವ್ಯರ್ಥವಾಯಿತು ಹಾಯೆಂದೂ ||ಮಿಥ್ಯಾ ವಿಷಯದಿ ಬೆಂದೂ |ನಿತ್ಯಾನಿತ್ಯ ವಿಚಾರಿಸಿ ತಿಳಿದವ 1
ವೇದೋಪನಿಷದಗಳಿಂದ ಬಹು |ಸಾಧಿಸಿ ತಿಳಿಯದರಿಂದ ||ಮೋದದಲ್ಲಿಹ ಸ್ವಾನಂದ |ತದ್ಬೋಧದಿ ಪರಮಾನಂದದಿ ರಮಿಪನು 2
ಜನ್ಮ ಮರಣ ಭಯ ನೀಗಿ |ಘನ ಉನ್ಮನಿ ಸ್ಥಾನದಿ ತೂಗಿ ||ತನ್ಮಯವೇ ತಾನಾಗಿ |ಚಿನ್ಮಯ ರಾಮನೊಳೈಕ್ಯವ ಪಡೆದವ 3
***
No comments:
Post a Comment