..
kruti by ಭೀಮಾಶಂಕರರು ದಾಸರು bheemashankara
ಜೋ ಜೋ ಜೋ ಜೋ ಜೋ ಎನ್ನ ಗುರುವೆ ಜೋ ಜೋ ಜೋ ನಿಜ ಕಲ್ಪತರುವೆ ಜೋ ಜೋ ಎಂದು ಜನ್ಮಕ್ಕೆ ಬರುವೆ | ಜೋ ಜೋ ನಿಮ್ಮ ಚರಣದಲ್ಲಿರುವೆ ಜೋ ಜೋ ಪ
ಅಷ್ಟ ಸಿದ್ಧಿಗಳೆಲ್ಲ ಬಡ್ಡಿಯ ಕೊರೆಸಿ | ಗಟ್ಟ್ಯಾಗಿ ವೇದದ ಕಾಲವ ನಿಲ್ಲಿಸಿ ಅಷ್ಟತತ್ತ್ವದ ಹುರಿ ಹೆಣಿಕಿಲಿ ಬಿಗಿಸಿ | ತೊಟ್ಟಿಲೊಳರುವಿನ ಹಾಸಿಗೆ ಹಾಸೀ || ಜೋ ಜೋ 1
ಸಾಧನ ನಾಲ್ಕೆಂಬೋ ಹಗ್ಗವ ಹೊಸೆದು | ಬೋಧದ ಗಂಟು ತುದಿಯಲ್ಲಿ ಬಿಗಿದು | ನಾದ ಅನಾಹತ ಗಂಟೆಯ ಹೊಡೆದು | ಆದಿ ಗುರುವಿನ ಮಲಗಲಿ ಕರೆದು || ಜೋ ಜೋ || 2
ಕಾಲಿಗೆ ಯೋಗದ ಪಾಶವ ಕಟ್ಟಿ | ಮೂಲೈದು ಬ್ರಹ್ಮರಂಧ್ರಕ್ಕೆ ಮುಟ್ಟಿ | ಮೇಲಿನ ಜೋತೆಗೆ ಭಾಸದ ಬುಟ್ಟಿ | ಲೀಲೆಯಿಂದಲಿ ನೋಡು ಗುರುವಿನ ದೃಷ್ಟಿ || ಜೋ ಜೋ 3
ಮನಸೀಗೆ ಬಾರದ ಮಾತುಗಳಾಡಿ |ನೆನೆಹಿಗೆ ನಿಲ್ಕದ ನಿತ್ಯನ ಕೂಡಿ | ಕನಸು ಎಚ್ಚರದ ಗಾಢವ ನೋಡಿ |ಉನ್ಮನಿ ಬೆಳಗುವ ಮೂರ್ತಿಯ ಪಾಡಿ || ಜೋ ಜೋ 4
ಭಕ್ತಿ ವಿರಕ್ತಿಗೆ ಸಿಲ್ಕುವನೀತಾ | ಸತ್ಯ ಶರಣ್ಯ ಸದ್ಗುರು ನಾಥಾ | ಕರ್ತೃತ್ವ ಇಟ್ಟನು ಮೌನದಲ್ಲೀತಾ | ವೃತ್ತಿ ವಿರಹಿತ ಗಿರಿ ಪಾಲಿಸು ಗುರುತಾ || ಜೋ ಜೋ 5
***
No comments:
Post a Comment