RSS song
ಸದಾ ಮೊಳಗುತಿರಲಿ ದುಂದುಭಿಯ ಘೋಷ
ಪ್ರತಿನಿಧಿಸಿ ಪ್ರತಿಧ್ವನಿಸಿ ದಿಗ್ವಿಜಯದಾಶಾ ||ಪ||
ಪಾಂಡುರಂಗನ ಖಂಡ ಪಾಂಚಜನ್ಯದ ಧ್ವನಿಗೆ
ಪಾಂಡವರ ಗುಂಡಿಗೆಯು ಗರಿಗೆದರಿದಂತೆ
ಚಂಡಿ ಚಾಮುಂಡಿಯರ ಅಟ್ಟಹಾಸವ ಕಂಡು
ಭಂಡ ರುಂಡಗಳಂದು ಧರೆಗುರುಳಿದಂತೆ ||೧||
ಪ್ರಳಯ ರುದ್ರನ ಡಮರು ವಾದನದ ಸ್ಪಂದನದಿ
ತಾಂಡವದ ತಾಳಲಯ ರೂಪುಗೊಂಡಂತೆ
ಸ್ವರ್ಗದಿಂ ಧುಮ್ಮುಕ್ಕಿ ಭೋರ್ಗರೆವ ಜಲಧಾರೆ
ಜಗದಗಲ ಸಂಭ್ರಮದಿ ಹರಿದಾಡಿದಂತೆ ||೨||
ಭರತಖಂಡ ಪ್ರಚಂಡ ಗಂಡುಗಲಿಗಳ ತಂಡ
ಚಂಡಮಾರುತದಂತೆ ಅಪ್ಪಳಿಸಿದಾಗ
ಅಖಿಲ ಭೂಮಂಡಲವೆ ಥರಥರನೆ ಕಂಪಿಸುತ
ವೈರಿಕುಲ ಉದ್ಧಂಡ ಶರಣು ಬಂದಾಗ ||೩||
ರಿಪು-ಧಮನಿಗಳ ದಮನ ಖಳ ಶಕುನಿಗಳ ಶಮನ
ಗಮನವೆಮ್ಮದು ಗಹನ ಗಗನದೆಡೆಗೆ
ನಿಲ್ಲದಿದು ರಣಘೋಷ ವಾದನದ ಅನುರಣನ
ಗೆಲ್ಲುವುದೆ ಗುರಿಯೆಮದು ಕಟ್ಟಕಡೆಗೆ ||೪|
***
No comments:
Post a Comment