RSS song
ಅಮೂರ್ತ ಮೂರ್ತ ಮೂರ್ತಿಮಂತ ನಿನ್ನೊಲು ನಾವಾಗಲಿ
ನಿನ್ನ ನಡೆಯ ನೆಲೆಯನಾಂತು ದೇಶಕಾಯ ತೊಡಗಲಿ ||ಪ||
ಮೊಗ್ಗು ಮೊಗವು ಬಿರಿಬಿರಿಯೆ ಹಿಡಿಹೂಗಳು ತಾವರಳಲಿ
ದಿವ್ಯಗಂಧವೆಲ್ಲ ಹರಡಿ ಅವನಿಯು ಪರಿಮಳಿಸಲಿ ||೧||
ಪುಷ್ಪಫಲದ ವಾಂಛೆಯುಳಿದು ಸಮರ್ಪಣೆಯ ಭಾವ ತಳೆದು
ಧ್ಯೇಯದೇವನೆದುರಿನಲ್ಲಿ ಸ್ವಾರ್ಥ ಹೋಮವಾಗಲಿ ||೨||
ಲೋಕಸೇವಾ ಭಕ್ತಿ ಭಾವ ಎಂಬುದೊಂದೇ ಧ್ಯೇಯ ದೇವ
ನಿರತ ಪೂಜೆಯಿಂದ ದೇವ ನಿನ್ನ ರೂಪ ದೊರೆಯಲಿ ||೩||
ದಿವ್ಯ ಭವ್ಯ ರಾಷ್ಟ್ರಜ್ಯೋತಿ ನಿನ್ನ ತೇಜಕಿಲ್ಲ ಸಾಟಿ
ಜ್ಯೋತಿರ್ಮಯ ದೀಪ್ತಿಯಿಂದ ಸಕಲ ಹೃದಯ ಬೆಳಗಲಿ ||೪||
ನಿನಗೆ ಸರಿಸಮಾನರೆನಿಸಿ ಬೆಳೆದು ವರ್ಧಮಾನರೆನಿಸಿ
ದೇಶ ಧರ್ಮ ಸಂಸ್ಕೃತಿಗಳು ನೆಲೆಯನಾಂತು ಬೆಳೆಯಲಿ ||೫||
***
amUrta moorta moortimaMta ninnolu naavaagali
ninna naDeya neleyanaaMtu dESakARya toDagali ||pa||
moggu mogavu biribiriye hiDihUgaLu tAvaraLali
divyagaMdhavella haraDi avaniyu parimaLisali ||1||
puShpaphalada vAMCeyuLidu samarpaNeya BAva taLedu
dhyEyadEvanedurinalli svArtha hOmavAgali ||2||
lOkasEvA Bakti BAva eMbudoMdE dhyEya dEva
nirata pUjeyiMda dEva ninna rUpa doreyali ||3||
divya Bavya rAShTrajyOti ninna tEjakilla sATi
jyOtirmaya dIptiyiMda sakala hRudaya beLagali ||4||
ninage sarisamAnarenisi beLedu vardhamAnarenisi
dESa dharma saMskRutigaLu neleyanAMtu beLeyali ||5||
***
ಅಮೂರ್ತ ಮೂರ್ತ ಮೂರ್ತಿಮಂತ ನಿನ್ನೊಲು ನಾವಾಗಲಿ
ನಿನ್ನ ಚರಣ ಶರಣು ಪಡೆದು ದೇಶ ಸೇವೆಗೊದಗಲಿ ||ಪ||
ಮೊಗ್ಗು ಮೊಗ್ಗು ಬಿರಿದು ಬಿರಿದು ಹಿಡಿಹೂಗಳು ಅರಳಲಿ
ದಿವ್ಯಗಂಧವೆಲ್ಲ ಹರಡಿ ಅವನಿಯು ಪರಿಮಳಿಸಲಿ ||೧||
ಪುಷ್ಪಫಲದ ವಾಂಛೆಯಳಿದು ಸಮರ್ಪಣೆಯ ಭಾವ ತಳೆದು
ಧ್ಯೇಯದೇವನೆದುರಿನಲ್ಲಿ ಸ್ವಾರ್ಥ ಹೋಮವಾಗಲಿ ||೨||
ಒಂದೆ ಧ್ಯೇಯ ನಿನಗೆ ದೇವ ಮುಡಿಪು ಸೇವೆ ಭಕ್ತಿ ಭಾವ
ನಿರತ ಪೂಜೆಯಿಂದ ನಿನ್ನ ದೇವ ರೂಪ ದೊರೆಯಲಿ ||೩||
ದಿವ್ಯ ಭವ್ಯ ರಾಷ್ಟçಜ್ಯೋತಿ ನಿನ್ನ ತೇಜಕಿಲ್ಲ ಸಾಟಿ
ಜ್ಯೋತಿರ್ಮಯ ದೀಪ್ತಿಯಿಂದ ಸಕಲ ಹೃದಯ ಬೆಳಗಲಿ ||೪||
ನಿನಗೆ ಸರಿಸಮಾನರೆನಿಸಿ ಬೆಳೆದು ವರ್ಧಮಾನರೆನಿಸಿ
ದೇಶ ಧರ್ಮ ಸಂಸ್ಕೃತಿಗಳ ನೆಲೆಯನಾಂತು ಬೆಳೆಯಲಿ ||೫||
***
No comments:
Post a Comment