Sunday, 19 September 2021

ನಮ್ಮ ಚೋರ ಕೃಷ್ಣಗ ಯಾವ purandara vittala NAMMA CHORA KRISHNA YAAVA


ನಮ್ಮ ಚೋರ ಕೃಷ್ಣಗ 

ಯಾವ ಪಾಪಿ ದೃಷ್ಟಿ ತಾಕಿತೆ..

ಓಡ್ಯಾಡೋ ಕಂದಗ 

ಎಂಥ ಪಾಪಿ ದೃಷ್ಟಿ ತಾಕಿತೆ.. 


ಶಿಶು ಹಸಿದನೆಂದು ಗೋಪಿ 

ಮೊಸರು ನುಂಗಿರಲು 

ಯಶವ ಬಾಲರ ದೃಷ್ಟಿ ತಾಗಿ

ಮೊಸರು ತಿನ್ನಲಿಲ್ಲವೆ 

ಎಂಥ ಪಾಪಿ ದೃಷ್ಟಿ ತಾಕಿತೆ..

ಓಡ್ಯಾಡೋ ಕಂದಗ ಯಾವ ಪಾಪಿ

ದೃಷ್ಟಿ ತಾಕಿತೆ..?! 

ಎಂಥ ಪಾಪಿ ದೃಷ್ಟಿ ತಾಕಿತೆ..

ನಮ್ಮ ಚೋರ ಕೃಷ್ಣಗ 

ಯಾವ ಪಾಪಿ ದೃಷ್ಟಿ ತಾಕಿತೆ..


ಓಡ್ಯಾಡೋ ಕಂದಗ 

ಎಂಥ ಪಾಪಿ ದೃಷ್ಟಿ ತಾಕಿತೆ..

ಶಲ್ಯ ಹೊಡಿಸಿ ಮಲ್ಲೆ ಮುಡಿಸಿ 

ಚೆಲ್ವು ವಸಣಿಗೆ ತಿಲಕವನಿಟ್ಟು 

ವಲ್ಲಭ ಶ್ರೀ ಪುರಂದರ ವಿಠಲನ

ಗೊಲ್ಲತ್ತೆಯರು ನೋಡಿದರೇನೋ..?! 

ಎಂಥ ಪಾಪಿ ದೃಷ್ಟಿ ತಾಕಿತೆ..

 

ನಮ್ಮ ಚೋರ ಕೃಷ್ಣಗ 

ಯಾವ ಪಾಪಿ ದೃಷ್ಟಿ ತಾಕಿತೆ 

ಓಡ್ಯಾಡೋ ಕಂದಗ
ಎಂಥ ಪಾಪಿ ದೃಷ್ಟಿ 
ತಾಕಿತೆ..

***


No comments:

Post a Comment