.
kruti by baddannayyacharyaru ಬಡಣ್ಣಯ್ಯಾಚಾರ್ಯರು
ಮನದಿ ನಿನ್ನ ತಪವ ಮಾಡಿಸೊ ಮಾಧವ l
ಅನುದಿನದಲದನೆ ಬಯಸುವೆ ಯಾದವ ll ಪ ll
ಸ್ನಾನ ಸಂಧ್ಯಾದಿ ಸತ್ಕರ್ಮ ಮಾಡಿಸು ಬಿಡು l
ಹೀನ ಸಂಗವ ಕೊಡು ಕೊಡದಲಿರು l
ಜ್ಞಾನಿ ಎಂದೆನಿಸು ಅಜ್ಞಾನಿ ಎಂದೆನಿಸು l
ನಾನಂಜುವನಲ್ಲ ನಳಿನನಾಭಾ ll 1 ll
ನಿನ್ನಿಂದಲೆ ಸೃಷ್ಟಿ ನಿನ್ನಿಂದಲೆ ಸ್ಥಿತಿಯು l
ನಿನ್ನಿಂದಲೆ ಪ್ರಳಯಾ ನಿಯಮಗಳು l
ನಿನ್ನಿಂದಲೆ ಜ್ಞಾನ ನಿನ್ನಿಂದಲಜ್ಞಾನ l
ನಿನ್ನಿಂದಲೆ ಬಂಧ ಮೋಕ್ಷವೆಂಬ ವಿಧ ll 2 ll
ಪ್ರಿಯ ನೀನೆ ಸರ್ವ ಜಗಕ್ಕೆಂಬರ್ಥವನು ಕೃಷ್ಣ l
ದಯಮಾಡಿ ನೀ ಪೇಳಿದಂತೆ ನಿತ್ಯ l
ವಯನವನೆ ಕೊಟ್ಟು ಭವಭೀತಿ ಹರಸಲು ಕೃಪಾ l
ವಿಟ್ಠಲವ್ಯಾಸ ವಿಧಿವಂದೇ ವಿಭುವೇ ll 3 ll
***
ಮನದಿ ನಿನ್ನ ತಪವ ಮಾಡಿಸೊ ಮಾಧವ ಪ
ಅನುದಿನದಲದನೆ ಬಯಸುವೆ ಯಾದವ ಅ.ಪ
ಸ್ನಾನ ಸಂಧ್ಯಾದಿ ಸತ್ಕರ್ಮ ಮಾಡಿಸು ಬಿಡು
ಹೀನ ಸಂಗವ ಕುಡುಕುಡದಲಿರು
e್ಞÁನಿ ಎಂದೆನಿಸು ಅe್ಞÁನಿ ಎಂದೆನಿಸು
ನಾನಂಜುವನಲ್ಲ ನಳಿನನಾಭ 1
ನಿನ್ನಿಂದಲೇ ಸೃಷ್ಟಿ ನಿನ್ನಿಂದಲೇ ಸ್ಥಿತಿಯು
ನಿನ್ನಿಂದಲೇ ಪ್ರಳಯ ನಿಯಮಗಳು.
ನಿನ್ನಿಂದಲೇ e್ಞÁನ ನಿನ್ನಿಂದಲe್ಞÁನ
ನಿನ್ನಿಂದಲೇ ಬಂಧಮೋಕ್ಷವೆಂಬ ವಿಧ 2
ಪ್ರಿಯನೀನೆ ಸರ್ವಜಗಕ್ಕೆಂಬರ್ಥಏನು ಕೃಷ್ಣ
ದಯಮಾಡಿ ನೀ ಪೇಳಿದಂತೆ ನಿತ್ಯ
ದಯವನೆ ಕೊಟ್ಟು ಭವಭೀತಿ ಹರಿಸಲು ಕೃಪಾ
ಮಯವಿಠಲವ್ಯಾಸ ವಿಧಿಒಂದೇ ವಿಭುವೇ 3
***
No comments:
Post a Comment