..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಪತಿ ಪೋದನೆಂದು ಶೋಕಿಸುವುದ್ಯಾಕೆ ಶ್ರೀ -
ಪತಿಯು ಇರಲಾಗಿ ಮರುಳೆ ಪ
ಪ್ರತಿ ಪ್ರತಿ ಜನ್ಮದಿ ಜತೆ ಮಾಡಿದ ಪಂಚ -
ಭೂತದ ಕಾಯ ಸತ್ಯ ಸ್ಥಿರವಲ್ಲವೇ ಮರುಳೆ ಅ.ಪ
ನೋತ ಪುಣ್ಯಾಪುಣ್ಯದ ಫಲ
ವ್ರಾತ ಸುಖ ಸುಖವಿತ್ತು ಬರಿದಾಗುವುದು
ನಿತ್ಯವಾಗಿ ಸುಖವೆ ಇರಲೆಂದು ಬೇಡಿದರೆ
ವ್ಯರ್ಥಧಾವತೆ ಅಲ್ಲದೆ ಸಾರ್ಥಕೆಲ್ಲಿ ಮರುಳೆ 1
ಸೃಷ್ಟಿಯಲಿ ಎಲ್ಲರೂ ನಷ್ಟವಾಗುವರಲ್ಲದೆ
ಶ್ರೇಷ್ಠರಾಗಿ ಬಾಳುವರೊಬ್ಬರಿಲ್ಲ
ಎಷ್ಟು ಶೋಕಿಸಿದರು ಪೋದ ಕಾಷ್ಠ ಬರಲರಿಯದು ಎ-
ಳ್ಳಷ್ಟು ಲಾಭ ಇದರಿಂದ ಇಲ್ಲ ಮರುಳೆ2
ಮುಟ್ಟಿ ಕಟ್ಟಿದ ತಾಳಿಯ ಸಂಬಂಧ
ಕೊಟ್ಟ ಹರಿ ತಾ ತಟ್ಟನೆ ಒಯ್ದ ಮೇಲೆ
ದುಷ್ಟವೆನ್ನದಲೆ ಇಷ್ಟವೆಂದೆಣಿಸಲು
ಸೃಷ್ಟಿಪತಿಯು ತುಷ್ಟನಾಗುವ ಮರುಳೆ 3
ಸರಿಯಲ್ಲಾ ಬರಿದೆ ಚಿಂತಿಸುವುದು ನಿನಗೆ
ಕರೆಕರೆಯು ಹೆಚ್ಚುವುದು ಮುಂದೆ ಬಹಳ
ಹರಿಕಥೆಯ ಕೇಳು ಹರಿದಾಸರೊಳ್ ಬೀಳು
ಹರಿಗೆ ಪೇಳು ನಿನ್ನಯ ಗೋಳು 4
ಇನ್ನಾದರೂ ನೀನು ಹರಿಯ ಸಂಕಲ್ಪವಿದೆಂದು
ನಿನ್ನ ಮನದೊಳು ತಿಳಿದುಕೊಂಡು
ಘನ್ನ ಮಹಿಮಾ ವಿಜಯ ರಾಮಚಂದ್ರವಿಠಲನ್ನ
ಸನ್ನುತಿಸಲು ಮುನ್ನೆ ಹತಿಯಾಗುವುದು ಮರುಳೆ 5
***
No comments:
Post a Comment