Monday, 2 August 2021

ಪವಮಾನ ಪಾವನಮೂರ್ತಿಯು ನೀನು ಕಾವುದೆಮ್ಮನು ankita uragadrivasa vittala

ಪವಮಾನ ಪಾವನಮೂರ್ತಿಯು ನೀನು ಕಾವುದೆಮ್ಮನು ಪ


ಭುವನ ಚತುರ್ದಶದಲ್ಲಿಹ ಜೀವರ

ಜೀವನ ನಿನ್ನದೋ ದೇವವರೇಣ್ಯಅ.ಪ


ತೃಣಜೀವರಾದಿ ಸರ್ವರೊಳು ನಿಂತು

ಗುಣಕಾಲಕರ್ಮಕ್ಕನುಗುಣನಾಗಿಹ ಫಲವ ನೀನಿತ್ತು

ಕ್ಷಣ ಬಿಡದೆಲೆ ನೀನಗಣಿತ ಕಾರ್ಯವ

ದಣಿಯದೆ ಮಾಡಿಸಿ ಧಣಿಗರ್ಪಿಸುವಿಯೊ1


ಶ್ರೀ ಜಗದ್ಗುರುವರೇಣ್ಯನೆ ನೀನು ಋಜುಸಾರ್ವಭೌಮ

ನಿಜ ಪಾದಾಂಬುಜವ ತೋರಿಸೊ ಇನ್ನು

ಈ ಜಗ ಕಾರ್ಯ ನಿವ್ರ್ಯಾಜದಿ ಮಾಡುತ

ನೀ ಜಯಾಪತಿಗರ್ಪಿಸಿ ಅಜಪದ ಪಡೆದೆಯೊ2


ಕೋಟಿತ್ರಯರೂಪನೆ ಕಾಯುವುದಯ್ಯ

ದಾಟಿಸು ಭವಶರಧಿಯಾ

ಪಾಟುಪಟ್ಟದ್ದೆಲ್ಲ ನೀನರಿಯಾ

ಸಾಟಿಯುಂಟೆ ಲಲಾಟನೇತ್ರ ಬೆ

ನ್ನಟ್ಟಿ ಬರಲು ಕೇದಾರಕೆ ಅಟ್ಟಿದೆ 3


ಮರಣ ಜನುಮಂಗಳು ಬಂದರೆ ಬರಲಿ ಹರಿಗುರುಗಳಲಿ

ಸ್ಮರಣೆಯು ತಪ್ಪದೆ ನಿಶ್ಚಲವಿರಲಿ

ಉರುತರ ಹರಿಸರ್ವೋತ್ತಮವೆಂಬುವ

ತರತಮ ಭೇದವು ನಿರುತವು ಇರಲಿ 4


ಶ್ರವಣ ಮನನಾದಿ ಭಕುತಿಯನ್ನು ಪವಮಾನ

ನೀ ಕೊಡು ಅನುಮಾನಿಸಬೇಡವೋ ನೀ ಇದಕ್ಕಿನ್ನು

ಭವಮೋಚಕ ಶ್ರೀ ವೇಂಕಟೇಶ

ಇನ್ನೊಳಹೊರಗಿಹನೆಂಬುವುದನು ತೋರೋ 5

****


No comments:

Post a Comment