Wednesday, 1 September 2021

ಭವ ರೋಗ ಹರವಾದೊಂದೌಷಧಿತ್ರೈಭುವನ ವಿಖ್ಯಾತವಾಗಿದೆ ಬುದ್ಧಿವಂತರಿಗೆ ankita shree krishna

 ..

ಭವರೋಗ ಹರವಾದೊಂದೌಷಧಿತ್ರೈಭುವನ ವಿಖ್ಯಾತವಾಗಿದೆ ಬುದ್ಧಿವಂತರಿಗೆ ಪ


ಚತುರ ವೇದಶಾಸ್ತ್ರ ಮೇಣಷ್ಟಾದಶವಾದಸ್ಮøತಿತರ್ಕ ಪೌರಾಣದಡವಿಯಲ್ಲಿಮತಿವಂತ ಮುನಿಗಳಾರಿಸಿ ತಂದು ತಾವುಪ್ರತಿಗಂಡು ಲೋಕಕ್ಕೆ ಹಿತವಾಗಿ ತೋರುವ 1


ಅಡವಿಯೊಳರಸಿ ಅಗಿಯಲಿಲ್ಲ ತಂದುಇಡಿದು ಚೂರ್ಣವಮಾಡಿ ಒಣಗಿಸಲಿಲ್ಲಕುಡಿದು ಕಹಿಖಾರವೆಂದೆನಲಿಲ್ಲ ನೋಡೆಬಡವ ಬಲ್ಲಿದರೆಲ್ಲರಿಗೆ ಸಾಧ್ಯವಾಗಿಪ್ಪ 2


ಪಥ್ಯಪಾನದ ನೇಮಗಳಿಲ್ಲ ಹೋಗಿಸ್ತೋತ್ರ ಮಾಡಿ ವೈದ್ಯನ ಬೇಡಲಿಲ್ಲನಿತ್ಯಸೇವಿಸೆ ಆಲಸ್ಯಗಳಿಲ್ಲ ನೋಡೆಮತ್ಯಾರ ಮಾತ ನಡೆಸುವ ಬಗೆಯಿಲ್ಲ3


ರಸಪಾಷಾಣಾದಿ ಮೂಲಿಕೆಯನು ತಂದುಕುಶಲದಿ ಶೋಧಿಪ ಕೋಟಲೆಯಿಲ್ಲಮಿಸುಣಿ ವರ್ಣದ ಭಸ್ಮ ತೈಲಗಳೆಂತೆಂಬಫಸಣೆಯಿಲ್ಲದೆ ಗಾಂಧರ್ವರು ಸೇವಿಪ 4


ಒಮ್ಮೆ ಸೇವಿಸೆ ಜನ್ಮ ಜನ್ಮಂಗಳ ದು-ಷ್ಕರ್ಮ ಸವೆದು ಸಕಲಾನಂದವೀವಘಮ್ಮನೆ ಕೃಷ್ಣರಾಯನ ಪುರದಲಿ ಬಿಡದÉಮ್ಮ ರಕ್ಷಿಪ ಮುದ್ದುಕೃಷ್ಣ ಕೃಷ್ಣಯೆಂಬ 5

***


No comments:

Post a Comment