Thursday, 5 August 2021

ಮಾಧವ ಮಧುಸೂದನ ಕೇಶವ ಹರೆ ankita kamalanabha vittala

 ..

kruti by Nidaguruki Jeevubai


ಮಾಧವ ಮಧುಸೂದನ ಕೇಶವ ಹರೆ

ಯಾದವ ಕೃಷ್ಣ ಶ್ರೀಹರಿ ಶೌರೆ ಪ


ವೇದವೇದ್ಯ ಸನÀ್ಮುನಿಗುಣ ಸೇವಿತ

ಸಾಧುವಂದಿತ ಚರಣಕೆ ನಮಿಪÉ ಅ.ಪ


ಮಂದರಧರ ಗೋವಿಂದ ಮುಕುಂದನೆ

ಇಂದಿರೆಯರಸ ಹೃನ್ಮಂದಿರದಿ

ಮಂದಗಮನೆ ಮಹಾಲಕ್ಷ್ಮಿಯೊಡನೆ ಆ-

ನಂದದಿ ನಲಿನಲಿದಾಡು ಹರಿ 1

ಸರಸಿಜನಾಭನೆ ಮುರಳಿಧರನೆ ಹರಿ

ಪರಮಪುರುಷ ಪಾವನರೂಪ

ಸುರಗಂಧರ್ವರು ಸ್ತುತಿಸುತ ಪಾಡ್ವರು

ವಿನುತ ಸುತ ವಾಹನ ಹರಿಯೇ2

ಆದಿಪುರುಷ ಪುರುಷೋತ್ತಮ ಹರಿ ಈ

ಕ್ರೋಧಿ ವತ್ಸರ ಶುಭದಿನಗಳಲಿ

ಆದರದಲಿ ಗುರುಹಿರಿಯರ ಸೇವಿಸಿ

ಶ್ರೀಧರನನ್ನು ಭಕ್ತಿಲಿ ಭಜಿಸಿ 3


ಗೋಕುಲಪತಿ ಗೋವಿಂದ ಮುಕುಂದನೆ

ಮಾತುಳಾಂತಕ ಮಧುಸೂದನನೆ

ಗೋಪತಿ ಕೃಷ್ಣನೆ ಸಲಹುವ ಸುಜನರ

ಮೂಕಾಂಬಿಕೆ ನಾಮವ ಧರಿಸಿ 4


ಕಡುಹರುಷದಿ ನಿನ್ನಡಿಗಳಿಗೆರಗುವೆ

ಬಿಡದೆ ರಕ್ಷಿಸೆಂದೆನ್ನುತಲಿ

ಕರುಣದಿ ಕಾಪಾಡುತ ಸಲಹುವದು

ಕಮಲನಾಭ ವಿಠ್ಠಲ ದೇವ 5

***


No comments:

Post a Comment