..
ಸೋಜಿಗ ಸೋಜಿಗ ಗೋವಿಂದನ ಸೋಜಿಗ ಗೋಪಾಲನ ಸೋಜಿಗ ಪ
ಇಂದಿರೆ ರಮಣ ಈ ಪರಬ್ರಹ್ಮ | ಮಂದರೋದ್ಧಾರ ಈ ದೇವಾ | ತಂದೆ ತಾಯಿ ತ್ರೈಲೋಕ್ಯಕ್ಕೆ ತಾನಾಗಿ ನಂದ | ಆನಂದ ಯಶೋದೆಗೆ ಮಗನಾದ ನೋಡಮ್ಮ || ಸೋಜಿಗ 1
ಸದಮಲ ಸ್ವರೂಪ ಸಚ್ಚಿದಾನಂದನು |ಮುನಿಜನ ವಂದಿಪನು ಈ ದೇವ ಮುನಿಜನ ವಂದಿಪನು |ಪದುಮನಾಭ ಪೀತಾಂಬರಧರ ದೇವ ವಿದುರನ | ಆವಿದುರನ ಮನೆಯಲ್ಲಿ ಉಂಡದ್ದು ನೋಡಮ್ಮ ಸೋಜಿಗ2
ನಾನಾ ದೇವರ ದೇವ ನಾರಾಯಣ ಹರಿ ನಿಜಸುರ ವಂದಿ-ಪನು ಈ ದೇವ | ಭಾನು ಕೋಟಿ ತೇಜ ಜ್ಞಾನ-ಬೋಧನ ಸ್ವಾಮಿ | ತಾನಾಗಿ ಭಕುತಿಗೆ ಒಲಿದದ್ದುನೋಡಮ್ಮ ಸೋಜಿಗ 3
***
No comments:
Post a Comment