ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದಾನಲ್ಲೆವೆ ಮನೆಗಿಂದು ಕೇಳವ್ವಾ ರಂಗ ಪ
ಬಂದಾ ಮನೆಗಿಂದು|ಮುಕುಂದ ದಯಾಸಿಂಧು|ಆ ನಂದವನೆ ತಂದು|ಸಂಧಿಸಿಕೊಟ್ಟಾ ದೀನಬಂಧು 1
ನಂಬಿದವರ ಕಾವಾ|ಅಂಬುಜಾಕ್ಷದೇವಾ| ನೆಂಬ ಬಿರದವಾ|ರಂಬಿ ತೋರಿದಾ ಜೀವರಜೀವಾ2
ತಂದೆ ಮಹಿಪತಿ|ನಂದನ ಸಾರಥಿ| ಬಂದು ನೆರದಾರಥಿ|ಛಂದವಾಯಿತು ಜನ್ಮಕಥೆ 3
****
No comments:
Post a Comment