Friday, 6 August 2021

ಸೈ ಸೈ ಸದ್ಗುರುವಿನ ದಯದಿಂದೆಲ್ಲಾ ಮೈ ಮರೆತೆನೆ ಐ ಅದು ಏನು ಕಾರಣ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ಸೈ ಸೈ ಸದ್ಗುರುವಿನ ದಯದಿಂದೆಲ್ಲಾ ಮೈ ಮರೆತೆನೆ |ಐ ಅದು ಏನು ಕಾರಣ ಮೈ ಮರೆದು ಮತ್ತುಳಿದೆನೆ | ಕೈ ಕೈ ತಲೆ ಮೇಲಿಡಲು ವೈರಾಗ್ಯ ಪಡೆದೆನೆ |ಥೈ ಥೈಯಂತ ಕುಣಿಸಿ ತನ್ನಂತೆ ತಾ ಮಾಡಿದನೆ ¥

ನಾನೂ ನೀನೆಂಬುದು ಮರೆಸಿ ತಾನೇ ತಾನಾದನೆ |ಮಾನ ಅಪಮಾನ ಎರಡೂ ಪಾನ ಮಾಡಿದನೆ |ಜ್ಞಾನ ಮಾರ್ಗವ ತೋರಿ ಧ್ಯಾನ ಹೇಳಿದನೆ |ಖೂನ ತೋರಿಸಿ ವಿನೋದ ಮಾಡಿದನೆ 1


ನಾದ ಶಬ್ದದಿ ಮನಲುಬ್ಧ ಮಾಡಿದನೆ |ವಾದಿ ದುರ್ವಾದಿಗೂಡ ಕಾದಿ ಗೆಲಿಸಿದನೆ |ಭೇದಾಭೇದವ ಅರಿಯದ ಹಾದೀ ತೋರಿದನೆ |ಈದ ಹುಲಿಯಂಥ ಮನಸು ಸಾದ ಮಾಡಿದನೆ 2


ಭೃಕುಟಿ ಮಧ್ಯದಿ ವಸ್ತು ಪ್ರಕಟ ಮಾಡಿದನೆ | ಆಸನ ದ್ವಾರ ಕವಾಟವ ಬಲಿಸಿ ಶ್ವಾಶಗಳೆಲ್ಲಾ ನಿಲಿಸಿದನೆ | ನಾಸಿಕಾಗ್ರದ ಕೊನೆಯ ಮೇಲೆ ಭಾನು ಪ್ರಕಾಶವ ತೋರಿದನೆ | ಈಶನು ದತ್ತ ಮಹೇಶ ದಿಗಂಬರ ಘೋಷದೊಳಗೆ ಮನವೀಸಿದನೆ 3

***


No comments:

Post a Comment