Thursday, 17 October 2019

ಪಂಕಜ ಪತಿ ಪಂಕಜ ಸಖ ಸಂಕಾಶಾನೇಕಾ ankita vijaya vittala


ಪಂಕಜ ಪತಿ |
ಪಂಕಜ ಸಖ ಸಂಕಾಶಾನೇಕಾ |
ಸಂಕಟಳಿದು ನಿಃಶಂಕನ ಮಾಡೊ |
ಅಂಕೆಯವನೆಂದು || ಪ

ಬಂದೆ ಎದುರಿಲಿ ನಿಂದೆ ಸಿರಬಾಗಿ |
ಒಂದೆ ವಂದನೆಯೆಂದೆ ಲೋಕದ ತಂದೆ ಮನಸಿಗೆ |
ತಂದೆ ನಿನಗ ಇಂದೆ ಅಂದದನು |
ಹಿಂದೆ ಯೆಸಗಿದ ದ್ವಂದ್ವ ಪಾಪಕೆ ಒಂದೆ ನಿನ್ನಂಘ್ರಿ |
ಎಂದೆಗೆಂದಿಗೆ ಮುಂದೆ ಜನನಗಳು 1

ನೋಡು ಎನ್ನ ಕೂಡಾಡು ದಯವನ್ನು |
ಮಾಡು ಮುದದಿಂದಲಾಡು ಮಾತನು | 
ನೀಡು ಕರುಣವ |
ಹೋಡುಗಾರರು ಬೀಡಿನೊಳಗಿದ್ದು |
ಕಾಡುವದು ನಾನಾಡಲೇನು |
ಈಡು ನಿನಗೆಲ್ಲಿ ನಾಡೊಳು ಕಾಣೆ 
ಮೂಡಲಾದ್ರಿ ನಿಲಯಾ 2

ಸಾರಿದೆನೊ ಮನಸಾರ ನಿನ್ನಂಘ್ರಿ ಸಾರಾ|
ಸಾರವೆಂಬದಾಸಾರವನು ನೂಕಿ |
ಸಾರ ಹೃದಯರ ಸಾಲೆಲಿರಸೆನ್ನ |
ಕಂಸಾರಿ ಪ್ರತಿದಿನ | 
ಸಾರಥಿಯಾಗೊ ಸಾರಿಸಾರಿಗೆ |
ಸಾರಬೋಕ್ತಾ ವಿಜಯವಿಠ್ಠಲ 
ಕೆಲಸಾರದೆ ಸಾರಲಿರೊ 3
*********

No comments:

Post a Comment