Tuesday 1 June 2021

ನೆರದು ಗೋಪಿಯರೆಲ್ಲಾರು ಕೃಷ್ಣಯ್ಯನ ankita helavana katte

ನೆರದು ಗೋಪಿಯರೆಲ್ಲಾರು ಕೃಷ್ಣಯ್ಯನ ಶೆರಗಪಿಡಿದುಕೊಂಡು

ಭರದಿಂದ ಬಂದು ಯಶೋದೆಗೆ ಛಾಡಿಯ

ಅರುಹಿದರತಿ ಬೇಗದಿ ಪ.


ಬಲುಕಳ್ಳ ನಿನ್ನ ಮಗ ಗೋಪಮ್ಮ ಕೇಳೆ

ಹಾಲು ಕರವುತಿರಲು

ತೊಲೆಗೆ ನಿಚ್ಚಣಿಕೆಯ ಹಾಕದೆ ಸುರಿದಾನು

ನೆಲವಿನ ಪಾಲ್ಮೊಸರಾ 1


ಅಂಮೈಯ್ಯಾ ಇಲ್ಲಾ ಕಾಣೆ ಇವಳು ಯಂನ್ನಾ

ಸುಂಮ್ಮಾನೆ ದೂರುವಳು

ಹುಂಮ್ಮಿಂದ ನಾನವಳ ಅಟ್ಟಕ್ಕೆ ನೆಗವೊರೆ

ಬೊಮ್ಮ ಜಟ್ಟಿಗನೆ ನಾನು 2


ಮತ್ತೊರ್ವಳಿಂತೆಂದಳು ನಿಂನಮಗ

ಹತ್ತಿ ಗವಾಕ್ಷಿಯಿಂದಾ

ಬಚ್ಚಿಟ್ಟ ಬೆಣ್ಣೆಯನೆಲ್ಲಾವ

ಮೆದ್ದಾನು ಮಕ್ಕಳಿಗಿಲ್ಲದಂತೆ 3


ಗಡಿಗೆ ಬೆಣ್ಣೆಯ ಮೆಲ್ವಾರೆ ಇವನ

ಹೊಟ್ಟೆ ಕೆರೆಭಾವಿಯೇನೆ ಅಮ್ಮಾ

ಹುಡುಗರಿಗೆ ಎಂದು ಬಚ್ಚಿಟ್ಟ ಬೆಣ್ಣೆಯನೆಲ್ಲಾ

ಹೊಡೆದರವರ ಮಕ್ಕಳು 4


ಮಲಗೋಮಂಚದ ಮೇಲೆ ನಾ

ಮಲಗೀರೆ ಮೊರೆವ ಹಾವನು ಪಿಡಿದು

ಅರಿಯದಂತೆ ಬಂದು ಮುಸುಕಿ-

ನೊಳಗಿಟ್ಟು ಅರಿಯಾದೆ ಹೋದನಂಮಾ 5


ಹರನಡುಗುವ ಹಾವನು ನಾ ಪಿಡಿವಾರೆ

ತರಳಾನು ತಡೆಕಾರನೆ

ಹರಕೆಯ ಹೊತ್ತುದವಪ್ಪಿಸದಿದ್ದರೆ

ಗುರುತು ತೋರÀಲು ಬಂತೇನೊ 6


ಮಕ್ಕಳ ಪಡೆದವರುಯಿಲ್ಲದ ಕಳ

ವಿಕ್ಕಲಿ ಬಹುದೆ ಕೃಷ್ಣಗೆ

ಸಿಕ್ಕಿದ ತಪ್ಪು ಸಹಿತವೆ ತಂದರೆ ನಾನು

ತಕ್ಕ ಬುದ್ದಿಯ ಪೇಳುವೆ 7


ಅಣುಮಯರೂಪ ಕಾಣೆ

ನಿಂನಯ ಮಗ ಚಿನುಮಯ ರೂಪ ಕಾಣೆ

ಚಿನುಮಯ ರೂಪ ಹೆಳ

ವನಕಟ್ಟೆ ಆದಿಕೇಶವ ರಂಗನೆ8

****


No comments:

Post a Comment