Thursday, 17 October 2019

ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ಹಿರಣ್ಯಕಶ್ಯಪು ತಾ ankita vijaya vittala

ವಿಜಯದಾಸ
ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ಪ

ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು
ಪರಿಯ ದೈವವೆ ಮೊರೆಯೋಗಲೂ
ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು
ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ 1

ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟಿತಿರೆ
ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ
ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ 2

ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ
ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ
ಕಕ್ಕಸದ ದೈವ ಅನಂತ ಪದುಮನಾಭ
ಮುಕ್ತಿದಾಯಕ ವಿಜಯವಿಠ್ಠಲ ಮಹದಾ3
********

No comments:

Post a Comment