Thursday, 17 October 2019

ಭವ ಭಾವಿಸುವೊದು ಸೂಚನಾ ಪಾವನರಂಗಾ ankita vijaya vittala

ವಿಜಯದಾಸ
ಭವ ಭಾವಿಸುವೊದು ಸೂಚನಾ |
ಪಾವನರಂಗಾ | ಜೀವಾಂತರಂಗ | ಜೀವ ತುರಂಗಾ |
ಹೃದ್ದಾವರೆಯಲಿ ನಿಲ್ಲು |
ಆವಾವ ಬಗೆ ಸು | ರೂಹ | ಆವಾಗ ತೋರುತ ಪ

ನಂದನಂದನಾ ಆನಂದಾ | ನಾಗನಾ | ಬಂಧಾ |
ಬೀಡಾದೆಕ್ಕೆಂದಾ | ದಾ ಖಳನ ಕೊಂದೆ |
ನಂದವ್ರಜದ ಗೋವಿಂದಾ | ಯಶೋದೆ ಕಂದಾ |
ಮಂದನು ನಾನು | ಇಂದೀಗ ನೀನು |
ಬಂದು ಸುರಧೇನು | ಪೊಂದು | ಇನ್ನೇನು |
ಮುಂದಣ ಇಹಸುಖ | ಒಂದು ವಲ್ಲೆನು ಸಖ |
ಕಂದ ನಂದದಿ ನೋಡು | ಕುಂದದ ವರವ ಕೊಡು |
ಎಂದೆಂದಿಗೆ ಪದದ್ವಂದಾರವಿಂದಕೆ | ವಂದಿಸುವೆನು ಬಾ |
ಲೇಂದು ವದನ ಪೊರಿಯೋದೆ ಲೋಕದ ತಂದೆ 1

ಮಂದರಧರ ಮಾಧವಾ | ಮಹದಾದಿ ದೇವಾ |
ಬೋವಾ | ಇಚ್ಛೈಸಿದರೆ ಕಾವಾ |
ವಾಸುದೇವ |
ನಿಂದು ಕರೆವೆನು ಒಂದೆ ಮನಸನು |
ತಂದು ವೇಗಾನು | ಸಂಧಿಸೆಂಬೆನು |
ಚಂದ ಚಂದದಿ ನಿನ್ನನಂದಕೆ ಹಿಗ್ಗುವೆ |
ಪತಿ |
ಬಂಧು | ಅತಿ ದಯಾಸಿಂಧು || 2

ಶ್ರೀಲತಾಂಗೀಯ ರಮಣಾ ಶೃಂಗಾರ ಚರಣಾ |
ಮಾಲಾ ಕೌಸ್ತುಭಾ ಭರಣಾ |
ಶೀಲಾ ಸದ್ಗುಣಗಣ ಸಿದ್ಧಸವ್ಯಾಕಾರಣ |
ನೀಲಲೋಹಿತ ಪಾಲಿಪನೆ ಪ್ರೀತ |
ಮೂಲೋಕದ ದಾತಾ | ಲಾಲೀಸಿ ಮಾತಾ |
ಪಾಲ ಸಾಗರಶಾಯಿ ಪತಿತ ನರನ ಕಾಯಿ |
ಮೇಲುಗಿರಿಯಲಿಪ್ಪಾ | ಮೇಲಾದ ತಿಮ್ಮಪ್ಪಾ
ವಾಲಗ ವೆಂಕಟ |
ಶೈಲಾ ವಿಜಯವಿಠ್ಠಲಾ | ನೀಯೋ ಗೋಪಾಲಾ 3
*********

No comments:

Post a Comment