2nd AUDIO ರಾಗ : ಸಿಂಧುಭೈರವಿ
2nd Audio by Vidwan Sumukh Moudgalyavasudhendra teertha (1761) rayara mutt yati stutih
ಶ್ರೀ ಜಗನ್ನಾಥದಾಸಾರ್ಯ ವಿರಚಿತ
ಶ್ರೀ ವಸುಧೇಂದ್ರತೀರ್ಥರ ಮಂಗಳ ಪದ
ವಸುಧಾತಲ ವಿಖ್ಯಾತಂ ವೈರಾಗ್ಯಾದಿ ಗುಣಾರ್ಣವಂ।
ವೇದ ವೇದಾಂಗ ಚತುರಂ ವಸುಧೇಂದ್ರ ಗುರುಂ ಭಜೇ॥
ಮಂಗಳ ಗುರು ವಸುಧೇಂದ್ರಗೆ ಜಯಾ
ಮಂಗಳ ಕಲ್ಯಾಣ ಗುಣಸಾಂದ್ರಗೆ॥ಪ॥
ವಾದೀಂದ್ರ ಗುರುವರ ಕುವರಗೆ ಮಂಗಳ
ಮೇದಿನಿ ಸುರವಿನುತಗೆ ಮಂಗಳ
ಸಾಧಿತ ಸಕಲ ಸುತತ್ವಗೆ ಮಂಗಳ
ವಾದಿವಾರಿದ ಚಂಡ ಪವಮಾನಗೆ॥೧॥
ವರತನಯೇತೀರ ಧರಣಿಧರಾಂಹ್ವಯ
ಪುರದಿ ವಿರಾಜಿಸುವಗೆ ಮಂಗಳ
ವರದೇಂದ್ರಯತಿವರ ಕರಕಮಲಾರ್ಚಿತ
ಚರಣಪಂಕೇಜಯುಗ್ಮಗೆ ಮಂಗಳ॥೨॥
ಸೂರಿ ಕುಲೋತ್ತಮ ಶ್ರೀರಾಘವೇಂದ್ರ
ಗುರು ಸದ್ವಂಶಜಾತಗೆ ಮಂಗಳ
ನಾರದನುತ ಜಗನ್ನಾಥವಿಠ್ಠಲನ
ಕರುಣಾಪಾತ್ರ ಸಂಯಮಿವರಗೆ॥೩॥
***
ಶ್ರೀ ಜಗನ್ನಾಥದಾಸರು...
ಮಂಗಳ ಗುರು ವಸುಧೇಂದ್ರಗೆ ಜಯ ।
ಮಂಗಳ ಕಲ್ಯಾಣ ಗುಣಸಾಂದ್ರಗೆ ।।
ವಾದೀಂದ್ರ ಗುರುವರ ಕುವರಗೆ ಮಂಗಳ ।
ಮೇದಿನಿ ಸುರವಿನುತಗೆ ಮಂಗಳ ।
ಸಾಧಿತ ಸಕಲ ಸುತತ್ತ್ವಗೆ ಮಂಗಳ ।
ವಾದಿವಾರಿದ ಚಂಡ ಪವಮಾನಗೆ ।।
ವರಾಹತನಯೇ ತೀರ ಧರಣಿಧರಾಂಹ್ವಯ ।
ಪುರದಿ ವಿರಾಜಿಸುವಗೆ ಮಂಗಳ ।
ವರದೇಂದ್ರ ಯತಿವರ ಕರಕಮಲಾರ್ಚಿತ ।
ಚರಣ ಪಂಕೇಜ ಯುಗ್ಮಗೆ ಮಂಗಳಾ ।।
****
No comments:
Post a Comment