time 0.19
ಭಕುತಿ ಸುಖವೊ ರಂಗ
ಮುಕುತಿ ಸುಖವೊ ಭಕುತಿ ಸುಖವೊ
ಮುಕುತಿ ಸುಖವೊ,
ಯುಕುತಿವಂತರೆಲ್ಲ ಹೇಳಿ ||ಪಲ್ಲವಿ||
ಭಕುತಿ ಮಾಡಿದ ಪ್ರಹ್ಲಾದ
ಮುಕುತಿಯನ್ನು ಪಡೆದುಕೊಂಡ
ಮುಕುತಿ ಬೇಡಿದ ಧ್ರುವರಾಯ
ಭಕುತಿಯಿಂದ ಹರಿಯ ಕಂಡ||-೧-||
ಭಕುತಿ ಮಾಡಿದ ಅಜಾಮಿಳನು
ಅಂತ್ಯದಲ್ಲಿ ಹರಿಯ ಕಂಡ
ಮುಕುತಿಯನು ಬೇಡಿದ ಕರಿರಾಜ
ದುರಿತಗಳನು ಕಳೆದುಕೊಂಡ ||-೨-||
ಭಕುತಿ-ಮುಕುತಿದಾತ
ನಮ್ಮ ಲಕುಮಿ ಅರಸ ವಿಜಯವಿಠಲ
ಶಕುತನೆಂದು ತಿಳಿದು ನಿತ್ಯ
ಭಕುತಿಯಿಂದ ಭಜನೆ ಮಾಡಿರೊ ||-೩-||
***
ಭಕುತಿ ಸುಖವೊ ರಂಗ ಮುಕುತಿ ಸುಖವೊ
ಭಕುತಿ ಸುಖವೊ ಮುಕುತಿ ಸುಖವೊ,
ಯುಕುತಿವಂತರೆಲ್ಲ ಹೇಳಿ ||ಪಲ್ಲವಿ||
ಭಕುತಿ ಮಾಡಿದ ಪ್ರಹ್ಲಾದ ಮುಕುತಿಯನ್ನು
ಪಡೆದುಕೊಂಡ ಮುಕುತಿ ಬೇಡಿದ ಧ್ರುವರಾಯ
ಭಕುತಿಯಿಂದ ಹರಿಯ ಕಂಡ||-೧-||
ಭಕುತಿ ಮಾಡಿದ ಅಜಾಮಿಳನು ಅಂತ್ಯದಲ್ಲಿ
ಹರಿಯ ಕಂಡ ಮುಕುತಿಯನು ಬೇಡಿದ
ಕರಿರಾಜ ದುರಿತಗಳನು ಕಳೆದುಕೊಂಡ ||-೨-||
ಭಕುತಿ-ಮುಕುತಿದಾತ ನಮ್ಮ ಲಕುಮಿ
ಅರಸ ವಿಜಯವಿಠಲ ಶಕುತನೆಂದು ತಿಳಿದು
ನಿತ್ಯ ಭಕುತಿಯಿಂದ ಭಜನೆ ಮಾಡಿರೊ ||-೩-||
***
pallavi
bhakuti sukhavO rangA mukuti sukhavO
anupallavi
bhakuti sukhavO mukuti sukhavO yukutivantarellA hELi
caraNam 1
bhakuti mADida prahlAda mukutiyennu paDedukoNDa
mukuti bEDida dhruvarAya yukutiyinda hariya kaNDa
caraNam 2
bhakuti mADiya ajamiLanu antyadalli hariya kaNDa
mukuti bEDida karirAja duritagaLanu kaLedukoNDa
caraNam 3
bhakuti mukuti dAta namma lakumiyarasa vijayaviThala
shakutanenuta tiLidu nitya bhakutiyinda bhajane mADirO
***
No comments:
Post a Comment