ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa
ಸಿಕ್ಕದೆ ಪೋಪೆಯೇತಕೆ ಮಾಂಗಿರಿರಂಗ ಪ
ಸಿಕ್ಕದೆ ಪೋಪೆಯೇಕೆ ಠಕ್ಕುಮಾಡುವೆಯೇಕೆ ಅಕ್ಕರೆಯಿಂದ ನಾ ಸಕ್ಕರೆ ಕೊಡುವೆನೆ ಅ.ಪ
ಚಿಣ್ಣರ ಕೂಡಾಡಿ ಕಣ್ಣುಸನ್ನೆಯ ಮಾಡಿ ಸಣ್ಣಕೊಳಲಪಾಡಿ ಬೆಣ್ಣೆಗಳ್ಳ ರಂಗಾ1
ಪಿಡಿದು ಬರುವೆನೆಂದು ಕಡಲಿನೊಳಗೆ ಮಿಂದು ಪೊಡವಿದೇವಿಯ ತಂದು ಕಡುನೊಂದುದಾಯ್ತಿನ್ನು 2
ತರಳ ಪ್ರಹ್ಲಾದನು ಕರೆಯುತಲಿಹನೇ ನಿನ್ನ ಕರದೆ ಬೆಣ್ಣೆಯನಿಟ್ಟು ಕರುಣಾಳು ಬಾರೆನಲ 3
ಕಡುನುಡಿಗಳ ಕೇಳಿ ಪಿಡಿಯಲಾರೆನೇ ನನ್ನ ಕಡೆಗಣಿಸಲಿ ಬೇಡ ಅಡಿಗೆರಗುವೆ ರಂಗಾ 4
ಮಾಂಗಿರಿಮೇಗಿಹ ಶೃಂಗಾರ ದೇವಯ್ಯ ರಂಗ ನೀನೆನ್ನಂತರಂಗ ದೇವದೇವಾ 5
ತಾಮರಸಾಕ್ಷನೆ ಕಾಮಿತ ದಾತನೆ ರಾಮದಾಸಾರ್ಚಿತ ಭೀಮವಿಕ್ರಮ ರಂಗಾ 6
***
No comments:
Post a Comment