ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa
ವೇದವಿದಿತ ಶೌರೀ ಮುರಾರೀ ಮಧು ಕೈಟಭವೈರೀ ಪ
ಭೋಗಿ ಶಯನ ಮಾಯ ಶ್ರೀಗುರು ಚಿನ್ಮಯ ನಾಗಭೂಷಣಹೃದಯಾ ಸದಯಾ ಅ.ಪ
ನಡುಗಡಲಿನೊಳೆನ್ನ ಬಿಡಬೇಡ ಸಲಹೆನ್ನ ಅಡಿಗೆರಗುವೆ ನಿನ್ನ ಶ್ರೀಶ ಮೋಹನ್ನಾ ಕಡುಬಾಲ ಧ್ರುವ ತನ್ನದೃಢದಿ ನೆನೆಯೆ ನಿನ್ನ ಪಡೆದನು ಪದವಿಯ ತಾ ವಿನೀತ 1
ಅಜಮಿಳವರದನೆ ಗಜರಾಜಗೊಲಿದನೆ ಸುಜನ ಸಮ್ಮಾನಿತನೆ ಮಾಂಗಿರಿಯರಸನೆ ಅಜಸುರ ವಿನುತನೆ ರಾಮದಾಸಾರ್ಚಿತನೆ ಭಜಕ ವಾರಿಧಿಸೋಮ ವಿರಾಮಾ 2
***
No comments:
Post a Comment