Thursday, 5 August 2021

ಮೃತ್ಯುವಿನ ಪರಿಹರಿಸೊ ಮೃತ್ಯುಂಜಯನೆ ankita tandevaradagopala vittala

.. 

kruti: tandevaradagopala vittala (ಪ್ರಹ್ಲಾದಗೌಡರು)


ಮೃತ್ಯುವಿನ ಪರಿಹರಿಸೊ ಮೃತ್ಯುಂಜಯನೆ ಪ


ಜಯ ಜಯಾ ಜಯವೆಂಬೊ ಅಸ್ತ್ರಗಳನಿತ್ತು ಪಾಲಿಸಿದಿ ಅ.ಪ.


ಪರೀಪರಿಯಿಂದ ಪರಿಜನರು ಬಾಧಿಸಲು ಪರಿಹಾಸ ಮಾಡುವುದುಚಿತವೇ ನಿನಗೆ 1

ಶರಣರಾ ಸುರಧೇನು ತವ ಶರಣೆಯಳ ವ್ರಣವ ಪರಿಹರಿಸೊ ರಣವಾಸಿಯೇ 2

ಸಾಸಿರಾ ಮಾತಿನೊಳು ಇದೇ ಸಾರವಾದದ್ದು ಸತೀ ದೇವೀರಮಣ ಸುಖ ಸುರಿಸೋತಂದೆವರದಗೋಪಾಲವಿಠಲನ ಸಖ 3

***


No comments:

Post a Comment