Thursday, 5 August 2021

ಮೋದ ಬೀರುತ ತಾ ಮೋದಪುರಕೆ ಬಂದವನ್ಯಾರೆಪೇಳಮ್ಮಯ್ಯಾ ankita tandevaradagopala vittala

 ..


kruti: tandevaradagopala vittala (ಪ್ರಹ್ಲಾದಗೌಡರು)

(ಶ್ರೀ ವಿಷ್ಣುತೀರ್ಥರು)


ಮೋದ ಬೀರುತ ತಾ ಮೋದಪುರಕೆ ಬಂದವನ್ಯಾರೆಪೇಳಮ್ಮಯ್ಯಾ ಪ


ಶುಕಮುನಿ ಪೇಳಿದ ಶಾಸ್ತ್ರದ ಸಾರವ ಸುರಿಸಿದ ಧೀರ ಶ್ರೀ ವಿಷ್ಣುತೀರ್ಥಾರ್ಯ ಕಾಣಮ್ಮಾಅ.ಪ.


ಶುದ್ಧವೃತ್ತಿಗಳಿಂದನುಭೋಗಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಜೀವರತಾ ಬುದ್ಧಿ ಭೇದಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಶೂನ್ಯರುಪದ್ರವ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಶುದ್ಧ ಶೃತಿ ಸ್ಮøತಿ ಪದ್ಧತಿ ತಪ್ಪದೆ ಇರುವೋ ಯತೀಶ್ವರರೇ 1

ಮರೆಪೊಕ್ಕವರನು ಮರೆಯದೆ ಪೊರೆವನದಾರೆ ಪೇಳಮ್ಮಯ್ಯಾ ಮೋರೆಯ ತೋರೆಂದು ಮಾರನಯ್ಯ ಮುರಾರಿಗೆ ಪೇಳ್ವವನಾರೆ ಪೇಳಮ್ಮಯ್ಯಾ ಮೋರೆ ಮೋಹಿಸಿ ಮೂಲೋಕವ ಸುತ್ತಿದನ್ಯಾರೆ ಪೇಳಮ್ಮಯ್ಯಾ ಮೋರೆ ಒಂದು ಮೂರು ಕಣ್ಣುಳ್ಳ ಬೊಮ್ಮನ ಪ್ರೀತಿಯ ಮಗನಮ್ಮ 2

ಬಂದು ಸೇವಿಸೆ ಘನ ಬಂಧನ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಹಿಂದು ಮುಂದು ತನ್ನ ನಂಬಿದವರ ಮನಮಂದಿರ ದಿಪ್ಪುವನ್ಯಾರೆ ಪೇಳಮ್ಮಯ್ಯಾ ಇಂದುಧರ ಖಳವೃಂದ ಮೋಹನ ಗುರು ನಂದಿವಾಹನನೇ ಪೇಳಮ್ಮಯ್ಯಾ ಇಂದಿರೇಶ ತಂದೆವರದಗೋಪಾಲವಿಠಲನ ಸೇವಿಪ ನೀಲಕಂಠ ಕಾಣಮ್ಮಾ 3

***


No comments:

Post a Comment