Sunday, 1 August 2021

ಬಾಗಿ ಸೋಪಿಲಿ ವಾಸವಾಗಿಹ ಯೋಗಿ ಪ್ರಾಣರಾಯಾ ankita shreeshapranesha vittala

 ..

kruti by shreeshapranesha vittala dasaru

(ಲಿಂಗಸುಗೂರಿನ ಹತ್ತಿರ ಇರುವ ಬಾಗಿಸೋಪಿನ ಗ್ರಾಮದ ಶ್ರೀ ಪ್ರಾಣೇಶನ ಸ್ತೋತ್ರ)


ಬಾಗಿ ಸೋಪಿಲಿ ವಾಸವಾಗಿಹ |ಯೋಗಿ ಪ್ರಾಣರಾಯಾ ||ಚಾಗುಮಾಡದೆ ಭಕ್ತರ ದುರಿತವ |ನೀಗಿ ಸಲಹಯ್ಯಾ ಪ


ಕಪಿಗಳೆಲ್ಲಾ ಸುಗ್ರೀವನ ಭಯದಿಂ |ತಪಿಸುತಲಿರೆ ಅವರಾ ||ಲಪನ ಕಾಣುತಲೆ ಅಭಯವನಿತ್ತು |ನಿಪೊರೆದೆ ಕಪಿವರಾ 1


ಹಿಂದೆ ಭೂಸುರನು ಚಿಂತಿಸುತಿರಲಾ |ನಂದದಿಂದ ಏನಾ ||ಬಂಧನಾ ಬಿಡಿಸಿದೆ ಬಕನನು ಕೊಂದು |ತಂದೇ ಶ್ರೀಪವನಾ 2


ಈಶನೆ ತಾನೆಂತೆಬುವ ಖಳರಾ ಸೋಸಿನಲ್ಲಿ ಮುರಿದೇ ||ಶ್ರೀಶ ಪ್ರಾಣೇಶ ವಿಠಲರಾಯನೇ |ಪರದೈವವೆಂದೊರದೇ 3

***


No comments:

Post a Comment