..
kruti by shreeshapranesha vittala dasaru
ಶ್ರೀ ರಾಘವೇಂದ್ರ ಗುರುರಾಜರ ಸ್ತೋತ್ರ
ರಾಯರ ನೋಡಿರೈ ಶ್ರೀ ಗುರು |ರಾಯರ ಪಾಡಿರೈ |ಶ್ರೀ ಯರಸನ ಪ್ರಿಯಕಂಜಾಪ್ತಾಭಸು |ಕಾಯ ಕವಿಜನಗೇಯಾ ಪ
ಶ್ರೀ ಸುಧೀಂದ್ರ ಕರಕಮಲದಲಿ ಸಂಭೂತಾ |ಬಹು ವಿಖ್ಯಾತಾ |ಶ್ರೀಶನ ಗುಣಗಳ ತುತಿಸುವ ಯತಿ ಶಿರೋಮಣಿಯೊ | ಚಿಂತಾಮಣಿಯೊ |ಈ ಸುಜನರ ಮನಸಿಗೆ ತೋರುವದಹಲ್ಲಾದಾ |ಶಿರಿ ಪ್ರಲ್ಹಾದಾ 1
ದಂಡಕಮಂಡಲ ಕಾಷಾಯವು ಸೂವಸನಾ |ವೇದ ವ್ಯಸನಾ |ಪುಂಡರೀಕ ಪದಭೃಂಗಾ ಮುನಿಕುಲೋತ್ತುಂಗಾ |ಕರುಣಾಪಾಂಗಾ |ಮಂಡಲದೊಳು ಬಹುತೋಂಡರ ಪರಿಪಾಲಕಾ |ವರ ಬಾಹ್ಲೀಕಾ 2
ತುಂಗಾ ತೀರದಿ ಮಂತ್ರಾಲಯದೊಳಗಿರುವೊ |ಕಲ್ಪ ತರುವೊ |ಗಂಗಾಜನಕ ವಿಹಂಗವಾಹನ ಇಲ್ಲಿಹನು |ನತ ಸುರದೇನು |ಮಂಗಳ ಮಹಿಮರ ದರುಶನ ಮಾತ್ರಾ ಫನಾಶಾ |ಶ್ರೀ ಗುರುವ್ಯಾಸಾ 3
ಪರಿಮಳ ವಿರಚಿಸಿ ಬುಧರಿಗೆ ಬೀರಿದದೀಶಾ |ಗುಣಗಂಭೀರಾ |ಪರಿಪರಿ ಚರಿತೆಯ ತೋರ್ದಭೂದೇವರ ದೇವಾ |ದೇವ ಸ್ವಭಾವಾ |ನರ ಇವರನು ಕ್ಷಣಬಿಡದಲೆ ಭಜಿಸಲು ಸುಖವೊ |ಅಹಿಕಾಮುಕವೊ (ಅಘ ಪರಿಹರವೊ) 4
ದುಷ್ಟ ಮತವ ಖಂಡಿಸಿ ಹರಿಪರನೆಂದೊರೆದಾ |ಭೀಷ್ಟಿಯಗರದಾ |ಸೃಷ್ಠಿಯೊಳಗೆ ಶ್ರೀಶ ಪ್ರಾಣೇಶ ವಿಠ್ಠಲನದಾಸಾಮುನಿಕುಲೋತ್ತಂಸಾ |ಎಷ್ಟು ಪೊಗಳಲಾಶಕ್ಯವು ಸದ್ಗುಣ ಸಾಂದ್ರಾ |ಶ್ರೀ ರಾಘವೇಂದ್ರಾ 5
****
No comments:
Post a Comment