..
ಹರಿ ನಿನ್ನ ಚರಣಾವ ಸ್ಮರಿಸೂವೊ ಭಕತಾಗೆ l
ದುರಿತರಾಶಿಗಳು ಉಂಟೆ l
ಪರಿಪರಿ ಸೌಖ್ಯವ ಕರುಣಿಸಿ ಕೊಡುವಂಥಾ l
ಚರಣಾವ ತೋರಿಸೈಯ್ಯಾ ಮಹರಾಯ ll ಪ ll
ಬಾರಯ್ಯ ದಯಮಾಡಿ ತ್ವರದಿ ಬೇಗ
ಬಾರಯ್ಯ ದಯಮಾಡಿ ll ಪ ll
ಒದರಲು ಕರಿರಾಜನೊದಗಿ ಬಂದೆ ಅಲ್ಲಿ
ಮದಭಯ ಭಾಗ್ಯವು ಒದಗಿದುಬ್ಬಸದಿಂದ ll 1 ll
ಸ್ತಂಭದಿ ನರಹರಿ ಎಂಬಭಾವದಿ ಬಂದು
ಕುಂಭಿನಿಪತಿ ಬಹು ಸಂಭ್ರಮಗೊಳುತಲಿ ll 2 ll
ನರನು ಅರ್ಚಕನೆತ್ತ ನರಹರಿ ನೀನೆತ್ತ
ಕರುಣದಿ ಬರಬೇಕು ಸಿರಿಹಯವದನ ll 3 ll
***
ಬಾರಯ್ಯ ದಯಮಾಡಿ ತ್ವರಿತದಿ ಬೇಗಬಾರಯ್ಯ ದಯಮಾಡಿ ಪ.
ಒದರಲು ಕರಿರಾಜನೊದಗಿ ಬಂದೆ ಅಲ್ಲಿಮದಭಯ ಭಾಗ್ಯವು ಒದಗಿದುಬ್ಬಸದಿಂದ 1
ಸ್ತಂಭದಿ ನರಹರಿ ಎಂಬಭಾವದಿ ಬಂದುಕುಂಭಿನಿಪತಿ ಬಹು ಸಂಭ್ರಮಗೊಳುತಲಿ 2
ನರನು ಅರ್ಚಕನೆತ್ತ ನರಹರಿ ನೀನೆತ್ತಕರುಣದಿ ಬರಬೇಕು ಸಿರಿಹಯವದನ 3
***
No comments:
Post a Comment