Wednesday, 1 September 2021

ಬಾರಯ್ಯ ಭಕ್ತವತ್ಸಲ ಶ್ರೀ ಗುರು ಮುದ್ದುಕೃಷ್ಣ ankita mahipati BAARAYYA BHAKTAVATSALA SRI GURU MUDDUKRISHNA

 ಕಾಖಂಡಕಿ ಶ್ರೀ ಮಹಿಪತಿರಾಯರು



ಬಾರಯ್ಯ ಭಕ್ತವತ್ಸಲ ಶ್ರೀ

ಗುರು ಮುದ್ದುಕೃಷ್ಣ ಮದನಗೋಪಾಲ ll ಧ್ರುವ ll


ಯಾದವಕುಲತಿಲಕ ಶ್ರೀದೇವದೇವ

ಸಾಧುಜನರ ಪಾಲಕ

ಉದ್ಧವ ಪ್ರಾಣಪೋಷಕ

ಆದಿಕೇಶವ ಸದಮಲ ಸುಖದಾಯಕ ll 1 ll


ಇಂದೀವರದಳನಯನ ನಂದಕುಮಾರ

ಸುಂದರ ಶುಭವದನ

ಮಾಧವ ಮಧುಸೂದನ

ಮಂಧರಧರ ವೃಂದ ಗೋಕುಲೋದ್ಧರಣ ll 2 ll


ಮುರಹರ ಸಂಕರುಷಣ ಉರಗಶಯನ

ತೋರಯ್ಯ ನಿಮ್ಮ ಚರಣ

ಬಾರಯ್ಯ ನಾರಾಯಣ

ಗರುಡವಾಹನ ಹೊರೆಯಾ ಮಹಿಪತಿ ಪ್ರಾಣ ll 3 ll

***


ಬಾರಯ್ಯ ಭಕ್ತವತ್ಸಲ ಶ್ರೀ ಗುರು ಮುದ್ದುಕೃಷ್ಣ ಮದನಗೋಪಾಲ ಪ  


ಯಾದವಕುಲತಿಲಕ ಶ್ರೀದೇವದೇವ ಸಾಧುಜನರ ಪಾಲಕ ಉದ್ಧವ ಪ್ರಾಣಪೋಷಕ ಆದಿಕೇಶವ ಸದಮಲ ಸುಖದಾಯಕ 1 

ಇಂದೀವರದಳನಯನ ನಂದಕುಮಾರ ಸುಂದರ ಶುಭವದನ ಮಾಧವ ಮಧುಸೂದನ ಮಂದರಧರ ವೃಂದ ಗೋಕುಲೋದ್ಧರಣ 2 

ಮುರಹರ ಸಂಕರುಷಣ ಉರಗಶಯನ ತೋರಯ್ಯ ನಿಮ್ಮ ಚರಣ ಬಾರಯ್ಯ ನಾರಾಯಣ ಗರುಡವಾಹನ ಹೊರೆಯಾ ಮಹಿಪತಿ ಪ್ರಾಣ 3

****


No comments:

Post a Comment