ಕಾಖಂಡಕಿ ಶ್ರೀ ಕೃಷ್ಣದಾಸರು
ಓ ಎನ್ನಬಾರದೇ ಹರಿಯೆ | ಶ್ರೀಯರಸನೇ ನೀನೇ ಗತಿಯೆಂದು ಅನ್ಯ ಉ| ಪಾಯವನರಿಯದ ಬಾಲಕ ಕರೆದರೆ ಪ
ಹಾಲವ ಬೇಡುವ ಮೊರೆಯಿಡಲುಪಮನ್ಯು ಆ | ಬಾಲಗ ಧ್ವನಿ ದೋರಿದಂತೆ | ಚಾಲವರಿದು ಸರೋವರದಲಿ ಕರೆದ ಶುಂ| ಡಾಲಗೆ ಧ್ವನಿ ದೋರದಂತೆ | ವ್ಯಾಳ್ಯೆಕ್ಕ ಒದಗೆಂದು ರಾತ್ರಿಲಿ ಕರೆದ ಪಾಂ| ಚಾಲಿಗೆ ಧ್ವನಿ ದೋರಿದಂತೆ | ಕಾಲಕಾಲಕ ಬಂದು ಮೊರೆಯಿಡೆ ಸುರಮುನಿ | ಜಾಲಕ ಮೈದೋರಿ ಧ್ವನಿ ದೋರಿದಂತೀಗ 1
ಆವಾಗ ಧ್ವನಿದೋರಿದಂತೆ | ಗೋವ ಮೇಯಿಸಿ ತೆರಳಲು ಗೊಲ್ಲರೊದರುವ ಭಾವಕ ಧ್ವನಿದೋರಿದಂತೆ | ದೇವ ನೀಮರಿಯಾಗೆ ಹುಂಕರಿಸ್ಸೊದರಲು | ಆವಿಗೆ ಧನಿ ದೋರಿದಂತೆ | ಕಾವನೈಯ್ಯನೆ ನಿನ್ನ ನೆನೆದ ಗೊಲ್ಲತೆರಾ | ಜೀವನ ಹಿತವಾಗಿ ಧನಿದೋರಿದಂತೀಗ 2
ಬಂದೂಳಗಕ ನಿನ್ನ ಪಾಂಡವರೊದಲು | ನಿಂದು ನೀ ಧನಿದೋರಿದಂತೆ | ಇಂದಾದಾ ಕಲಿಯುಗದ ದಾಸರ ಮಾತಿಗೆ | ಬಂದು ನೀ ಧನಿ ದೋರಿದಂತೆ | ಕಂದನಳುವ ಧ್ವನಿ ಕೇಳುತ ಜನನಿ ಅ | ನಂದದಿ ಧನಿದೋರುವಂತೆ | ತಂದೆ ಮಹಿಪತಿ - ನಂದನ ಪ್ರಭು ಗೋ | ವಿಂದ ಮುಕುಂದೆನ್ನ ಸಲಹೆಂಬ ಮೂಢನಾ3
***
No comments:
Post a Comment