..
ಭಾವದಲ್ಲಿಯೆ ಪೊರೆಯೊ ದೇವ ದೇವ ಪ
ಜೀವೋತ್ತಮರಸ ದೇವ ಗೋಪಾಲಕ ಅ.ಪ
ಸಂದೇಹ ಭೀತಿಯೊಳ್ ನೊಂದೆನೊ ಬಹುಕಾಲ
ಗಂಧವಾಹನ ವಂದ್ಯ ಸರ್ವ ಬಂಧೊ
ಬಂಧನವ ಬಿಡಿಸಲು ಭವ ಬೊಮ್ಮ ಸುರರಿಗೆ
ಒಂದಿಷ್ಟು ವಶವಲ್ಲವೆಂದು ದಯ ಸಲ್ಲಿಸೊ 1
ಒಳಗಿನಾ ಅಘಮೂಲವಳಿಯದೆ ಇಷ್ಟಾರ್ಥ
ಮಳೆಗರೆದರೇನೊ ಗುಣವ ಹೊಂದೆ
ಹಲುಬಿ ಬೇಡುವುದೊಂದು ಒಲಿದು ಕೊಡುವುದೊಂದು
ಫಲ ಬೇಧವಾದರೆ ಮನ ನಂಬಿಸುವುದೆಂತೊ 2
ಹರಿ ನಿನ್ನ ಇಚ್ಛೆಗೆ ಎದುರಿಲ್ಲವಾದರೆ
ಶರಣ ಸುರಧೇನು ಖರೆಯಾದರೆ
ನೆರೆ ನಂಬಿದೆ ನಿನ್ನ ಜಯೇಶವಿಠಲ
ಸುರರು ಜಯವೆಂಬಂತೆ ಹರಿಕೆಯ ಸಲಿಸೊ 3
***
No comments:
Post a Comment