..
ಭಾವವೇ ಕಾರಣವೊ ಭವಕೆ ದೇವ ಪ
ಭಾವಜಾಪಿತ ನಿನ್ನ ಭಾವ ಬಿಡದವ ಧನ್ಯ ಅ.ಪ.
ಭಾವಸೂತ್ರದಿ ಸಿಕ್ಕ ಬರಿ ಬೊಂಬೆ ಜಗವಯ್ಯ
ಭಾವಧಾರಕ ನೀನು ಎನ್ನಿಂದಲೇನಹುದೊ 1
ಎಂತು ನೀ ಕುಣಿಸಿದರೆ ಅಂತು ಕುಣಿವುದೊ ಜಗವು
ತಂತ್ರ ನಿನ್ನದು ದೇವ ಜಾವ ಜಾವದಿ
ಭ್ರಾಂತಿ ರೋಗವ ನೀಗಿ ಶಾಂತಿ ಪಾಲಿಸು ಹರಿಯೆ
ಸ್ವಾಂತರದಿ ಸಂತತ ದರುಶನವ ಕೊಟ್ಟೆನಗೆ 2
ವಿಷಯ ಸಂಗವ ಬಿಡಿಸು ಹೃಷಿಕೇಶ ಮೃಡಮಿತ್ರ
ವಿಷಮಗತಿ ಪರಿಹರಿಸು ಪ್ರಾಣಮನದ
ವೃಷಭಾದ್ರಿಪಸಖ ಜಯೇಶವಿಠಲನೆ ಕರುಣಾಬ್ಧಿ
ವರ್ಷಿಸೊ ಕೃಪೆ ವೃಷ್ಟಿ ಮದ್ಬಿಂಬಗಿದು ವಿಹಿತ 3
***
No comments:
Post a Comment