ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಧುರ ಸಂಗವ ಮಾಡೋ ಪ್ರಾಣಿ | ಸಾಧುರ ಸಂಗಾ ಮಾಡಲು ಯೋಗಾ | ಸಾಧಿಸಿ ಬಾಹುದು ನೋಡೋ ಪ್ರಾಣಿ ಪ
ಅತಿ ಬಳಲಿಸುವ ತಾಪತ್ರಯದೊಳಗ | ಮತಿಗಾಣದೆ ನೋಯ ಬ್ಯಾಡೋ ಪ್ರಾಣೀ | ಮತಿಯುತನಾಗಿ ಭವಖೋರೆ ದಾಟುವ | ಪಥವಾನರಿತು ಬ್ಯಾಗ ಕೂಡೋ ಪ್ರಾಣೀ 1
ಕ್ಷೀರ ನೀರ ವಿಭೇದವ ಮಾಡುವ ಮುಕ್ತಾ | ಹಾರನ ಗುಣ ಭರಣೀ ಮಾಡೋ ಪ್ರಾಣೀ | ಚಾರು ವಿವೇಕದಿ ಸೇವಿಸಿ ಸಾರಾವ | ಸಾರಾ ತ್ಯಜಿಸಿ ನಲಿದಾಡೋ ಪ್ರಾಣಿ 2
ಪರಿ ಜನದಲಿ ಮನವನು ಸಂಸಾರಲಿಡೋ ಪ್ರಾಣೀ ತನುಧನ ಬೆರಿಯದೆ ಮಹಿಪತಿಸುತ ಪ್ರಭು ವಿನ ಸ್ತುತಿ ಸ್ತವನವ ಪಾಡೋ ಪ್ರಾಣೀ 3
***
No comments:
Post a Comment