ಅನುದಿನ ಘನ ತನ್ನೊಳಗೆ ತುಂಬಿಹದು ನಿನ್ನೊಳಗೆ P
ಓದಿ ಕೇಳಿ ಮರುಳಾದ್ಯೊ ಮನವೆ ಸಾಧಿಸಲಿಲ್ಲ ಸ್ವರೂಪ ವೇದವೋದಿ ವಿವದಕೆ ನೀನು ಸಾಧಿಸಿದೊ ಬಲುಕೋಪ ಭೇದವಿಡಿದು ಬಾಧೆಗೆ ಗುರಿಯಾಗಿ ಆದಿ ನಿನಗೆ ನೀ ಪಾಪ ಘನಗುರು ಕುಲದೀಪ 1
ದೇಹದ ಒಳಗಿನ ದೇವರ ತಿಳಿಯದೆ ಬಾಹ್ಯ ರಂಜನಗೆದೆರದ್ಯೊ ಸೋಹ್ಯವರಿಯದೆ ಶ್ರೀಹರಿ ಭಕ್ತಿಯ ಅಹಂಭಾವದಿ ಮೆರೆದ್ಯೊ ದೇಹಾಭಿಮಾನದಲಿ ಸೋಹಂಭಾವದ ವಾರ್ತೆಯ ಜರಿದ್ಯೊ ಸವಿ ಸುಖವನು ಮರೆದ್ಯೊ 2
ಕನಸುದೋರುವ ಜನ ಪ್ರಪಂಚವ ನೆನೆಸಿ ಬಯಸುವದ್ಯಾಕೆ ಖೂನ ತಿಳಿಯದೆ ಸತ್ತು ಹುಟ್ಟಿ ಜನಿಸಿ ಬಾಹುದು ಯಾಕೆÉ ಹೀನಯೋನಿಯ ಮುಖದಲಿ ಬೀಳುವ ದಣುವಿಕಿ ನಿನಗಿದು ಬೇಕೆ ಅನುದಿನ ನಿನಗಿದು ತಾ ಸಾಕೆ 3
ಹಾದಿತಪ್ಪಿ ನಡೆವದು ವೇದಾಂತದ ಇದು ನಿನಗುಚಿತೆ ಸಾಧು ಸಜ್ಜನರನುಸರಿಸದೆ ತಾ ಇಹುದೊಂದು ಸ್ವಹಿತೆ ಗಾದಿಯ ಮಾತೆ ಬಂದುದು ಪುರುಷಾರ್ಥೆ 4
ಶರಣ್ಹೊಕ್ಕರ ಕರುಣಿಸಿ ನೋಡುವ ಎರಡಿಲ್ಲದೆ ಗುರುನಾಥ ಕರವಿಡಿದು ಪಾರನೆ ದಾಟಿಸುವಾ ಸುರಮುನಿಜನ ಸೇವಿತ ತರಣೋಪಾಯದ ಸಾಧನದೋರುವ ತರಳ ಮಹಿಪತಿ ದಾತ ಮನವೆ ನಿನಗಿದು ಸುಪಥ 5
***
No comments:
Post a Comment