ಕಾಖಂಡಕಿ ಶ್ರೀ ಕೃಷ್ಣದಾಸರು
ಸಂತರೆನ ಬಹುದೈಯ್ಯಾ ಇಂಥವರಿಗೇ | ಅಂತರಂಗದ ಹರಿ ಏಕಾಂತ ಭಕುತರೀಗೇ ಪ
ಸುಖಕ ಮೈಯ್ಯವ ಮರಿಯಾ | ದುಃಖಗಳಿದಿಂದೇ ನೋಯ | ಚಕಿತನಾಗನು ಕುಮತಿ ವಿಕಳ ನುಡಿಗೆ | ಪ್ರಕಟ ಸೌಖ್ಯಕ ಹಿಗ್ಗ | ಸಕಲರೊಳು ಹರಿಯೇ ವ್ಯಾಪಕ ವರಿದು ನಿರ | ಹಂಕೃತಿಯನುಳ್ಳರಿಗೇ 1
ಪರಮ ಭಾಗವತೆನಿಸಿ | ಪರರ ಮನಿಗಳಿಗ್ಹೋಗಿ | ಪಿರಿದು ವಿದ್ಯವ ತೋರಿ ಪೊರೆಯ ನೋಡಲಾ | ಪರಧನಕ ಕರವಿಕಲ | ಪರಸತಿಯರಿಗೆ ಕುರುಡ | ಪರರ ನಿಂದೆಗೆ ಮೂಕ ಪರವಶ್ಯಾದರಿಗೆ 2
ವೇಷಡಂಭಕವಿಲ್ಲಾ | ಕ್ಲೇಶ ಕರ್ಮಗಳಿಲ್ಲಾ | ಈ ಸಿರಿಯ ಸುಖದ ಮನದಾಶೆಯಿಲ್ಲಾ | ವಾಸುದೇವನ ಪದ | ಧ್ಯಾಸದನುಭವದಿ ನಟ | ಪರಿ ಸಂಸಾರ ಲೇಶ ದೋರ್ವರಿಗೆ 3
ಹರಿಯ ನಾಮವ ನೆನೆದು | ಹರಿಯ ಕೀರ್ತನೆಯಲ್ಲಿ | ಹರುಷಗುಡಿಗಟ್ಟಿ ತನು ಮರದು ನಿಂದು | ಬರುವ ಪ್ರೇಮಾಂಜಲಿಯ | ಭರಿತಲೋಚನನಾಗಿ | ತರಿಸಿ ತಾರಿಸುವ ಘನಕರುಣವಂತರಿಗೆ 4
ಇಂತು ದುರ್ಗಮವಿರಲು | ಸಂತರಾವು ನೀವೆಂದು | ಸಿಂತರವ ಹೋಗಿ ಜನ ಸಿಂತರಿಸುವಾ | ಭ್ರಾಂತ ಮೆಚ್ಚುವನಲ್ಲಾ | ಶಾತಗುರು ಮಹಿಪತಿ ಸ್ವಂತನುಜಗೆಂದಾ 5
***
No comments:
Post a Comment