Wednesday, 1 September 2021

ಬಾರೋ ಬಾರೋ ಕೋಪವಿನ್ಯಾತಕೆನ್ನ ಕೂಡಾ ರಂಗರಾಯಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬಾರೋ ಬಾರೋ ಕೋಪವಿನ್ಯಾತಕೆನ್ನ ಕೂಡಾ ರಂಗರಾಯಾ| ಸಾರಿದ ನಿನ್ನರಸಿಯ ತಪ್ಪನೊಳ್ಪರೇ ರಂಗರಾಯಾ ಪ 


ಚಲ್ವ ಕಣ್ದೆರೆವುತ ಮೊಗವತಿರಹುವರೇ ರಂಗರಾಯಾ| ಹಲ್ಲವ ಮಸೆಯುತ ಘುಡುಘುಡಿಸುವರೇ ರಂಗರಾಯಾ 1 

ಭೀಕರಾಕೃತಿಯಾಗಿ ಕೊಡಲಿಯ ಪಿಡವರೇ ರಂಗರಾಯಾ| ಏಕಾಂಕಿಯಾಗಿ ಕದ್ದು ತಿರುಗುವರೇ ರಂಗರಾಯಾ 2 

ಆಗೋಚರವಾಗದೇ ತುರಗೇರಿ ತ್ವರಿತದಿ ರಂಗರಾಯಾ| ಸುಮದಿ ಬಾ ಮಹಿಪತಿ ಸುತ ಜೀವನ ರಂಗರಾಯಾ 3

*** 


No comments:

Post a Comment