ಕಾಖಂಡಕಿ ಶ್ರೀ ಕೃಷ್ಣದಾಸರು
ಅವಧೂತಾ ನೀ ಅವಗುಣಗಳ ನಿರ್ಧೂತಾ ದೇವನಹುದೋ ಶ್ರೀನಾಥಾ P
ಭಾವಿಸಿ ನೋಡಲು ಭಾವಕತೀತ ಭವಹರ ಗುರು ಸಾಕ್ಷಾತ ಪಾವನಗೈಸುವದಯ ಪ್ರಖ್ಯಾತ ದೇವಾದಿಗಳೊಂದಿತ 1
ಝಗಝಗಿಸುವ ಜಗಜ್ಯೋತಿ ಸ್ವರೂಪ ಅಗಣಿಗತುಣೋಪಮೋಪ ತ್ರಿಗುಣರಹಿತ ಚಿದ್ಛನ ಚಿದ್ರೂಪ ಯೋಗಿಜನರ ಪಾಲಿಪ 2
ಇಹಪರದಾತ ಮಹಿಪತಿ ಗುರುನಾಥ ಬಾಹ್ಯಾಂತ್ರ ಸದೋದಿತ ಮಹಾಮಹಿನು ನೀ ಆನಂದಭರಿತ ಸಹಕಾರ ನೀ ಸತತ 3
***
No comments:
Post a Comment