..
ಇಂದಿರೆ ಪಾಲಿಸು ಎನ್ನ ಪ
ಇಂದಿರೆ ನಿನ್ನನು ವಂದಿಸಿ ತುತಿಸುವೆ
ವಂದಿಪ ಜನಕಾನಂದ ನೀಡುವ ದೇವೀ ಅ.ಪ
ಮಂದಜಾಸನ ಮುಖ ಸುರರಾ ಕರುಣ
ದಿಂದಲಿ ಪಾಲಿಪೆ ಅವರ
ಇಂದು ಮುಖಿಯೆ ನಿನ್ನ ಸದರ ಸದಾ
ಪೊಂದಿದ ಜನಕೆ ಅಧಾರಾ ಆಹ -
ಳೆಂದು ನಿನ್ನಯ ಪಾದದ್ವಂದ್ವಜಲಜ ಮನೋ -
ಮಂದಿರದಲಿ ನಿತ್ಯ ವಂದಿಪೆ ಹರಿರಾಣೀ 1
ಕರುಣವಾರಿಧಿ ನಿನ್ನ ಚರಣ - ಸದಾ
ಸ್ಮರಣೆ ಮಾಳ್ಪರ ಪಾಪಹÀರಣ
ಶರಣ ಜನರ ದುಃಖದಾವರಣ ಪರಿ -
ಹರಿಸಿ ಮಾಡುವಿ ಪೂರ ಕರುಣಾ ಆಹಾ
ಸರಿಯಿಲ್ಲ ನಿನಿಗಿನ್ನು ಹರಿಗೆ ಸಮಾಸಮೆ
ತ್ವರಿತಾದಿ ಎನ್ನನು ಮರೆಯದೆ ಪೊರೆಯೆಂದೆ2
ಮಾತೆ ದಾರಿದ್ರ್ಯವ ಕಳೆದು ನಿನ್ನ
ದೂತ ನಾನೆಂದು ನೀನೊಲಿದು
ಮಾತು ಲಾಲಿಸಿ ಭಾಗ್ಯಗರಿದು ಎನಗೆ
ನೀತವಾಗಿ ಸುಖ ಸುರಿದು ಆಹಾ
ದಾತಗುರುಜಗನ್ನಾಥವಿಠಲ ನೀ -
ಕೇತನ ಸುಖ ಎನಗೆ ಈ ತೆರ ನೀಡಮ್ಮಾ3
***
No comments:
Post a Comment