kruti by venugopala dasaru ಪುರಂದರದಾಸರ ಸ್ತೋತ್ರ ಪದ
ವಂದಿಪೆ ಪುರಂದರದಾಸರ ಪಾದದ್ವಂದ್ವಕೆ ನಾನು ನಿರಂತರ ಪ
ಮಂದರೋದ್ಧರ ಗೋವಿಂದ ಮುಕುಂದನಎಂದಿಗೂ ವಂದಿಸುತಿರ್ಪರ ಅ.ಪ
ಒದಗಿದ ಜ್ಞಾನವನೋಡಿಸಿ ಮತ್ತೆಸದಮಲ ಜ್ಞಾನವ ಪಾಲಿಸಿಪದುಮನಾಭನ ಕಥೆ ಕೇಳಿಸಿ ಸನ್‍ಮುದದಿ ಪಾಲಿಪರ ಧ್ಯಾನಿಸಿ 1
ಮೊರೆ ಹೊಕ್ಕ ಸುಜನಗಿಹಪರದ ಸುಖತರಗಳನೊದಗಿಸಿ ಹರಿಪದದಪರಮಭಕ್ತಿಯ ನೀವರೆಂದರೆ ದಾವಾಗಸ್ಮರಿಸುವೆನವರಿಗೆ ಕರಮುಗಿದು 2
ಅನಾಥಜನರನು ಮನ್ನಿಸಿವೇಣುಗೋಪಾಲ ವಿಠಲನ್ನ ಕಾಣಿಸಿಜ್ಞಾನಭಕ್ತಿಯ ಪಥ ತೋರಿಸಿ ಕಾಯ್ವಜ್ಞಾನಿಗಳರಸನ ತುತಿಸಿ ತುತಿಸಿ 3
***
No comments:
Post a Comment